ನಾಪೋಕ್ಲು ಡಿ.2 NEWS DESK : ಹಾವು ಕಚ್ಚಿ ಗಬ್ಬ ಹಸು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೈಕಾಡು ಗ್ರಾಮದಲ್ಲಿ ನಡೆದಿದೆ. ಕೈಕಾಡು ಗ್ರಾಮದ ಬೊಳ್ಳಂಡ ಸುಬ್ಬಯ್ಯ ಎಂಬವರ ಗಬ್ಬದ ಹಸುವನ್ನು ಪ್ರತಿದಿನದಂತೆ ತಮ್ಮ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಸಂಜೆ ಗದ್ದೆಗೆ ತೆರಳಿದ ಸಂದರ್ಭ ಹಸು ಸತ್ತು ಬಿದ್ದಿರುವುದು ಗೋಚರಿಸಿದೆ. ಬಳಿಕ ಪಾರಾಣೆ ಪಶುವೈದ್ಯಾಧಿಕಾರಿ ಲತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ವಿಷದ ಹಾವು ಕಚ್ಚಿ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.