ಮಡಿಕೇರಿ ಡಿ.2 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗಾಳಿಬೀಡು ಪ್ರೌಢಶಾಲೆ ಮೈದಾನದಲ್ಲಿ ನಡೆದ ಬಾಣೆಹಬ್ಬದಲ್ಲಿ ಹತ್ತು ಕುಟುಂಬ 18 ಗೋತ್ರದ ಗೌಡ ಜನಾಂಗ ಬಾಂಧವರು ಗುಡ್ಡಗಾಡು ಓಟ, ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಬೈತಡ್ಕ ಜಾನಕಿ ಬೆಳ್ಳಿಯಪ್ಪ ಉದ್ಘಾಟಿಸಿ, ಮಾತನಾಡಿ ಗೌಡ ಯುವ ವೇದಿಕೆ ವತಿಯಿಂದ ಬಾಣೆ ಹಬ್ಬ ಆಯೋಜಿಸಿರುವುದು ಸಂತಸದ ವಿಚಾರವಾಗಿದ್ದು, ಇದೇ ಕಾರ್ಯಕ್ರಮವನ್ನು ಐದೈದು ಗ್ರಾಮಗಳನ್ನು ಒಗ್ಗೂಡಿಸಿ ನಡೆಸುವಂತಾದರೆ ಜನಾಂಗದಲ್ಲಿನ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಲು ಸಹಕಾರಿ ಯಾಗುತ್ತದೆ ಎಂದರು. ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಗುಂಡು ಹೊಡೆಯುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯು ಒಗ್ಗಟ್ಟನ್ನು ಬಲಪಡಿಸಲು ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಪರಸ್ಪರ ಬಾಂಧವ್ಯ ವೃದ್ಧಿಸಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು. ಗುಡ್ಡಗಾಡು ಓಟವನ್ನು ರಾಷ್ಟ್ರೀಯ ಮ್ಯಾರಥಾನ್ ಓಟಗಾರ ಸೂದನ ಡಾಲಿ ಉದ್ಘಾಟಿಸಿದರು. ಉಳಿದಂತೆ ಮೂರು ವಿಭಾಗದ ಶೂಟಿಂಗ್ ಸ್ಪರ್ಧೆಯನ್ನು ಕೊಡಗು ಗೌಡ ಯುವ ವೇದಿಕೆ ಮಾಜಿ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಗೌ.ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ಗಾಳಿ ಬೀಡು ಗ್ರಾಮ ಪಂಚಾಯಿತಿ ಪಿಡಿಒ ಶಶಿಕಿರಣ ಉದ್ಘಾಟಿಸಿದರು. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಉಪಾಧ್ಯಕ್ಷ ಬಾಳಾಡಿ ಮನೋಜ್ ಕುಮಾರ್, ಓಟಗಾರ ಕೋಚನ ತೇಜಸ್, ದಾನಿ ಯಾಲದಾಳು ಸೋಮಯ್ಯ, ಪ್ರಮುಖರಾದ ಪರಿಚನ ಸತೀಶ್, ನವೀನ್ ದೇರಳ, ಕೆದಂಬಾಡಿ ಕಾಂಚನ ಸೇರಿದಂತೆ ಸದಸ್ಯರು, ಪದಾಧಿಕಾರಿಗಳು, ಗಾಳಿಬೀಡು ಗ್ರಾಮಸ್ಥರು ಇದ್ದರು. ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.
ಫಲಿತಾಂಶ :: ಏರ್ಗನ್ ವಿಭಾಗದಲ್ಲಿ ಕೆದಂಬಾಡಿ ಕೀಕಿ (ಪ್ರ), ಮಿಥುನ್ (ದ್ವಿ), ಕಡ್ಯದ ಮನ್ದೀಪ್ (ತೃ), 12 ಬೋರ್ ವಿಭಾಗದಲ್ಲಿ ಅಕ್ಷಿತ್ (ಪ್ರ), ರಾಹುಲ್ ಅರಂಬೂರು (ದ್ವಿ), ಉದಯ್ ಕುಮಾರ್ (ತೃ) ಸ್ಥಾನ ಪಡೆದುಕೊಂಡಿದ್ದಾರೆ. ಗಾಳಿಬೀಡು ಗ್ರಾಮಸ್ಥರಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಚೆನ್ನಪಂಡ ಉದಯಕುಮಾರ್ (ಪ್ರ), ಉಡುದೊಳಿ ಗಿರೀಶ್ (ದ್ವಿ), ಕೆ.ಎನ್.ರಾಜು (ತೃ),. .22 ವಿಭಾಗದಲ್ಲಿ ಅವಂದೂರು ಬೆಳ್ಳಿಯನ ಜಗದೀಶ್ (ಪ್ರ), ದೇವಯಿರ ಯತಿನ್ (ದ್ವಿ), ಉಳುವಾರನ ಚೇತನ್ (ತೃ) ಸ್ಥಾನ ಪಡೆದರು. ಮಹಿಳೆಯರ ಗುಡ್ಡಗಾಡು ಓಟದಲ್ಲಿ ಗಾನಸ್ವಿ ಸೂದನ (ಪ್ರ), ತೃಪ್ತಿ ನಿರ್ಜರಿ (ದ್ವಿ), ಕಡ್ಲೆರ ಲವಿತಾ (ತೃ), 4 ಕಿ. ಮೀ. ಪುರುಷರ ವಿಭಾಗದಲ್ಲಿ ಗವಿನ್ ಸೂದನ (ಪ್ರ), ರಿಶಿ ಕೆಂಜನ (ದ್ವಿ), ತರುಣ್ ಸಾಗರ್ (ತೃ), ಪುರುಷರ 8. ಕಿ.ಮೀ. ಮುಕ್ತ ಓಟದಲ್ಲಿ ಅಂಜೇರಿರ ತಿಶನ್ ಮಾದಪ್ಪ (ಪ್ರ), ಶಶಾಂಕ್ ವಿ.ಪೆರಂಬಾನು (ದ್ವಿ), ಹನೀತ್ ಎಳ್ಳೆಕಾಲು (ತೃ), ಬರ ಪೂವಣ್ಣ ವಿಶೇಷ ಬಹುಮಾನ ಪಡೆದರು.
Breaking News
- *ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಅರೆ ವಿಶೇಷ ಕೊಠಡಿ ಉದ್ಘಾಟನೆ*
- *ಸೋಮವಾರಪೇಟೆ : ವಿ ಕೇರ್ ಸೂಪರ್ ಸ್ಪೆಷಾಲಿಟಿ ದಂತ ಚಿಕಿತ್ಸಾ ಕೇಂದ್ರ ಉದ್ಘಾಟನೆ*
- *ಪುತ್ತೂರು : ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ತಾಂತ್ರಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ*
- *ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ*
- *ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾಮಟ್ಟದ ಕಲೋತ್ಸವ : ಸಿದ್ದಾಪುರ ವಲಯ ಚಾಂಪಿಯನ್*
- *ಸುಂಟಿಕೊಪ್ಪ : ಬೀದಿ ನಾಟಕದ ಮೂಲಕ ಹೆಚ್ಐವಿ ಕುರಿತು ಜಾಗೃತಿ*
- *ಸಹಾಯಧನಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಫೆಲೋಶಿಪ್ ಮತ್ತು ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ*
- *ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ : ಅರ್ಜಿ ಆಹ್ವಾನ*
- *ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ*