ಮಡಿಕೇರಿ ಡಿ.3 NEWS DESK : ಹೊಸ್ಕೇರಿ ಗ್ರಾಮದ ಬೇರೆಂಗಿ ಬೆಟ್ಟದ ಪ್ರಕೃತಿಯ ಸುಂದರ ತಾಣದಲ್ಲಿರುವ ಶ್ರೀ ಈಶ್ವರನ ಬಯಲ ದೇವಾಲಯದ 6ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಮುಂಜಾನೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಪ್ರಮುಖರಾದ ರಾಮಣ್ಣ, ದಿನೇಶ, ಮಣಿ, ಶಿವ ಕುಮಾರ, ಶೇಷಪ್ಪ, ಕೃಷ್ಣಪ್ಪ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ವಾರ್ಷಿಕೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಅನ್ನದಾನ ನೆರವೇರಿತು. ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.