ನಾಪೋಕ್ಲು ಡಿ.4 NEWS DESK : ಬಲ್ಲಮಾವಟಿ ವಲಯ ಕಾಂಗ್ರೆಸ್‍ನ ಸಭೆಯು ಬಲ್ಲಮಾವಟಿ ಪಿಂಚಣಿದಾರರ ಕಟ್ಟಡದಲ್ಲಿ ನಡೆಯಿತು. ವಲಯ ಕಾಂಗ್ರೆಸ್‍ನ ಅಧ್ಯಕ್ಷ ತಾಪಂಡ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಲ್ಲಮಾವಟಿ ವಲಯದ ಗ್ರಾಮಗಳಿಗೆ ನೀಡಿದ ಅನುದಾನದಲ್ಲಿ ಪೂರ್ಣಗೊಂಡ ಹಾಗೂ ಪೂರ್ಣಗೊಳ್ಳಲಿರುವ ಕಾಮಗಾರಿಗಳ ಬಗ್ಗೆ ಬಗ್ಗೆ ಚರ್ಚಿಸಲಾಯಿತು. ನಂತರ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಯ ಪಟ್ಟಿಯನ್ನು ಆದಷ್ಟು ಬೇಗನೆ ಸಿದ್ಧಪಡಿಸಿ ಶಾಸಕರ ಬಳಿ ಕೊಂಡೊಯ್ಯುವಂತೆ ತೀರ್ಮಾನ ಕೈಗೊಳ್ಳಲಾಯಿತು. ವಲಯದಲ್ಲಿರುವ ಗ್ರಾಮಸ್ಥರ ಕುಂದು ಕೊರತೆಗಳನ್ನು ತಿಳಿಯಲು ಹಾಗೂ ಸಮಸ್ಯೆಗಳನ್ನು ಶಾಸಕರ ಬಳಿ ತಲುಪಿಸಿ ಅದನ್ನು ಪರಿಹರಿಸಲು ವಲಯ ಮಟ್ಟದ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ನ ಉಪಾಧ್ಯಕ್ಷ ಮಚ್ಚುರ ಎಂ.ರವೀಂದ್ರ, ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಎಂ.ಉಮೇಶ್, ಬಲ್ಲಮಾವಟಿ ವಲಯ ಕಾಂಗ್ರೆಸ್ ನ ಕಾರ್ಯದರ್ಶಿ ಮಣವಟ್ಟಿರ ದಯಾ ಚಿಣ್ಣಪ್ಪ, ಬಲ್ಲಮಾವಟಿ ಬೂತ್ ಕಾಂಗ್ರೆಸ್ ಅಧ್ಯಕ್ಷ ಚಂಗೇಟಿರ ಕುಶಾಲಪ್ಪ, ನೆಲಜಿ ಬೂತ್ ಕಾಂಗ್ರೆಸ್ ಅಧ್ಯಕ್ಷ ಕೈಬುಲಿರ ಸಾಬು ಗಣಪತಿ, ಪೇರೂರು ಬೂತ್ ಅಧ್ಯಕ್ಷ ಪಾಳೆಯಡ ಅಯ್ಯಪ್ಪ, ಬಲ್ಲಮಾವಟಿ ಗ್ರಾ.ಪಂ ಸದಸ್ಯೆ ಕೋಡಿಯಂಡ ರಾಜೀವಿ, ಮಾಜಿ ಮಂಡಲ ಪ್ರಧಾನ ಮೂವೇರ ನಾಣಪ್ಪ, ಪಕ್ಷದ ಹಿರಿಯ ನಾಯಕಿ ಬೊಟ್ಟೋಳಂಡ ಜಾನಕಿ ಹಾಗೂ ಪಾಳೆರ ರಾಣಿ ಅಪ್ಪಣ್ಣ, ಎನ್.ಎಸ್.ಯು.ಐ ವಿದ್ಯಾರ್ಥಿ ಸಂಘಟನೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕರವಂಡ ಪೊನ್ನಪ್ಪ, ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಮುಕ್ಕಾಟಿರ ಯತೀಶ್, ಪಕ್ಷದ ನಾಯಕರಾದ ಕೋಡಿಯಂಡ ಶಶಿಕುಮಾರ್, ಅಪ್ಪಚೆಟ್ಟೋಳಂಡ ಮಿಥುನ್, ಕಾಂಗ್ರೆಸ್‍ನ ಹಿರಿಯ ಹಾಗೂ ಕಿರಿಯ ಮುಖಂಡರುಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.