ಮಡಿಕೇರಿ ಡಿ.4 NEWS DESK : ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯು ಬಿರುನಾಣಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಸಾಹಿತ್ಯ ಪರಿಷತ್ತಿನ ದ್ಯೆಯುದ್ದೇಶಗಳು, ಕೆಲಸ ಕಾರ್ಯಗಳು, ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಹಿತಿ ನೀಡಿದರು. ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ ಹುದಿಕೇರಿ ಹೋಬಳಿ ಜಿಲ್ಲೆಯಲ್ಲಿಯೇ ಒಂದು ಮಾದರಿ ಹೋಬಳಿಯಾಗಬೇಕು ಎಂದರು. ಹುದಿಕೇರಿ ಹೋಬಳಿಯ ಅಧ್ಯಕ್ಷರ ಬಾನಂಗಡ ಅರುಣ್ ಮಾತನಾಡಿ, ಹೋಬಳಿಯ ಕಾರ್ಯಕಾರಿ ಸಮಿತಿಯ ಆಯ್ಕೆ ಇಂದು ನಡೆಯಲಿದ್ದು ಎಲ್ಲರೂ ನನ್ನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಕೋರಿಕೊಂಡರು.
ನಂತರ ಜಿಲ್ಲಾಧ್ಯಕ್ಷರ ನಿರ್ದೇಶನದಲ್ಲಿ ನಡೆದ ಹೋಬಳಿ ಕಾರ್ಯ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ಗೌರವ ಕಾರ್ಯದರ್ಶಿಯಾಗಿ ಕುಪ್ಪಣಮಾಡ ಬೇಬಿ ನಂಜಮ್ಮ ದೇವಯ್, ಗೌರವ ಕೋಶಾಧಿಕಾರಿಯಾಗಿ ಅಣ್ಣಳಮಾಡ ಭವ್ಯ, ಸಂಘಟನಾ ಕಾರ್ಯದರ್ಶಿಯಾಗಿ ಕರ್ತಮಾಡ ಪಾರ್ವತಿ ವಿಜಯ, ಮಹಿಳಾ ಪ್ರತಿನಿಧಿಯಾಗಿ ನೆಲ್ಲಿರ ಶ್ವೇತಾ ಉದಯ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಸದಕುಮಾರ್, ಹಿಂದುಳಿದ ವರ್ಗ ಪ್ರತಿನಿಧಿಯಾಗಿ ಅಮ್ಮತ್ತಿರ ರಾಜೇಶ್, ಹೋಬಳಿ ಶಿಕ್ಷಣ ಇಲಾಖೆಯ ಪ್ರತಿನಿಧಿಯಾಗಿ ಬಿ.ಬಿ.ಸರಸ್ವತಿ, ಮುಖ್ಯೋಪಾಧ್ಯಾಯರು ಸರಕಾರಿ ಪ್ರಾಥಮಿಕ ಶಾಲೆ ಬಿರುನಾಣಿ.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪದನಿಮಿತ ಸದಸ್ಯರಾಗಿ : ಮೋಹನ್ ಕುಮಾರ್ ಮುಖ್ಯೋಪಾಧ್ಯಾಯರು ಜನತಾ ಹೈಸ್ಕೂಲು ಬದಿಕೇರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಆಯ್ಕೆಯಾದರು. ವಿಶೇಷ ಆಹ್ವಾನಿತರಾಗಿ ಅಣ್ಣಳಮಾಡ ಲಾಲಾ ಅಪ್ಪಣ್ಣ, ನೆಲ್ಲಿರ ಚಲನ್, ಬುಟ್ಟಿಯಂಡ ಲೀನ ಬೊಳ್ಳಮ್ಮ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ , ಅಣ್ಣಳಮಾಡ ಗಿರೀಶ್, ಅಣ್ಣಳಮಾಡ ಕಾಂತಿ ಚೋಂದಮ್ಮ, ಕರ್ತಮಾಡ ಫ್ಯಾನ್ಸಿ, ಕಾಳಿಮಾಡ ಸಬೀನಾ, ಅಣ್ಣಳಮಾಡ ಚಿನ್ನಪ್ಪ, ಕುಪ್ಪಣಮಾಡ ಸಲೀನಾ, ಕಳಕಂಡ ಪೂಣಚ್ಚ, ಬುಟ್ಟಿಯಂಡ ತಂಬಿ ನಾಣಯ್ಯ, ಬುಟ್ಟಿಯಂಡ ಧರಣಿ, ಕರ್ತಮಾಡ ಧರಣಿ, ಅಣ್ಣಳ ಗಿರೀಶ್,ಕರ್ತಮಾಡ ಸುಜಾಪೊನ್ನಪ್ಪ. ಆರಿಸಲಾಯಿತು ಹೇ ಗಿರಿ. ಸಭೆಯಲ್ಲಿ ಶ್ರೀಮಂಗಲ ಹೋಬಳಿ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಪೊನ್ನಂಪೇಟೆ ತಾಲ್ಲೂಕು ಗೌರವ ಕಾರ್ಯದರ್ಶಿ ಕೆ.ವಿ.ರಾಮಕೃಷ್ಣ, ಪೊನ್ನಂಪೇಟೆ ತಾಲೂಕು ಸಂಘ ಸಂಸ್ಥೆಗಳ ಪ್ರತಿನಿಧಿ ಶ್ರೀ ಬೊಳ್ಳೆರ ಕೆ.ಪೊನ್ನಪ್ಪ, ಪೊನ್ನಂಪೇಟೆ ತಾಲೂಕು ಮಹಿಳಾ ಪ್ರತಿನಿಧಿ ಶ್ರೀಮತಿ ಬುಟ್ಟಿಯಂಡ ಸುನಿತಾ ಗಣಪತಿ, ಸದಸ್ಯರಾದ ಶ್ರೀಮತಿ ಬುಟ್ಟಿಯಂಡ ರೋಹಿಣಿ ಶ್ರೀ ಉಳುವಂಗಡ ಉದಯ ಉಪಸ್ಥಿತರಿದ್ದರು. ಪೊನ್ನಂಪೇಟೆ ತಾಲೂಕು ಸಂಘ ಸಂಸ್ಥೆಗಳ ಪ್ರತಿನಿಧಿ ಬೊಳ್ಳೆರ ಕೆ.ಪೊನ್ನಪ್ಪ ಸ್ವಾಗತಿಸಿದರು. ಬಿರುನಾಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಿರುನಾಣಿಯ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಬಿ ಸರಸ್ವತಿ ವಂದಿಸಿದರು.