ಮಡಿಕೇರಿ ಡಿ.5 NEWS DESK : ಕುಶಾಲನಗರದಲ್ಲಿ ಶ್ರೀ ಗಣಪತಿ ರಥೋತ್ಸವದ ಪ್ರಯುಕ್ತ ಕರ್ನಾಟಕ ಅಮೇಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನ್ಯೂಜೆನ್ ಫಿಟ್ನೆಸ್ ಕುಶಾಲನಗರ ಮತ್ತು ಟೀಮ್ ಕಾವೇರಿ ಕ್ಲಾಸಿಕ್ ಸಹಯೋಗದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ “ಕಾವೇರಿ ಕ್ಲಾಸಿಕ್” (ರಾಜ್ಯಮಟ್ಟ) ವಿಭಾಗದಲ್ಲಿ ಬೆಸ್ಟ್ ಪೋಸರ್ ಪ್ರಶಸ್ತಿಯನ್ನು ಮೈಸೂರಿನ ನಜೀಬುಲ್ಲಾ ಖಾನ್ ಪಡೆದುಕೊಂಡರು. ಮೋಸ್ಟ್ ಮಸ್ಕ್ಯೂಲ್ ಮ್ಯಾನ್ ಪ್ರಶಸ್ತಿಯನ್ನು ಮೈಸೂರಿನ ಎಬ್ನೆಜರ್ ಕೆ ಪಡೆದುಕೊಂಡರು. ಕಾವೇರಿ ಕ್ಲಾಸಿಕ್ ಟೈಟಲ್ ಪ್ರಶಸ್ತಿಯನ್ನು ದಾವಣಗೆರೆಯ ಬಿ.ಕೆ.ಸುಶಿಲ್ ಕುಮಾರ್ ಪಡೆದುಕೊಂಡರು. ಕಾವೇರಿ ಕ್ಲಾಸಿಕ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗದ 25ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಮಿಸ್ಟರ್ ಕಾವೇರಿ ಮೆನ್ಸ್ ಫಿಸಿಕ್ಸ್ ಸ್ಪರ್ಧೆಯಲ್ಲಿ ಟೈಟಲ್ ವಿನ್ನರ್ ಪ್ರಶಸ್ತಿಯನ್ನು ಫ್ಯೂಚರ್ ಫಿಟ್ನೆಸ್ ಹಾಸನ ಜಿಲ್ಲೆಯ ಸ್ಪರ್ಧಿ ಇರ್ಫಾನ್ ಎ. ಪಡೆದುಕೊಂಡರು. ರನ್ನರ್ಸ್ ಪ್ರಶಸ್ತಿಯನ್ನು ಬೆಂಗಳೂರಿನ ಶ್ರೆಡ್ ಫಿಟ್ನೆಸ್ ಎಂ. ಶರತ್ ಕುಮಾರ್ ಪಡೆದುಕೊಂಡರು. ಮಿಸ್ಟರ್ ಕಾವೇರಿ ಮೆನ್ಸ್ ಫಿಸಿಕ್ಸ್ ನಲ್ಲಿ ರಾಜ್ಯದ ವಿವಿಧ ಭಾಗಗಳ 10ಕ್ಕೂ ಹೆಚ್ಚು ಸ್ಪರ್ಧೆಗಳು ಭಾಗವಹಿಸಿದ್ದರು. ಮಿಸ್ಟರ್ ಕೊಡಗು ಕಾವೇರಿ ಕ್ಲಾಸಿಕ್ ಸ್ಪರ್ಧೆಯಲ್ಲಿ ಕೊಡಗಿನ 25 ಸ್ಪರ್ಧಿಗಳು ಭಾಗವಹಿಸಿದ್ದರು. ಬೆಸ್ಟ್ ಪೋಸರ್ ಪ್ರಶಸ್ತಿಯನ್ನು ನ್ಯೂಜೆನ್ ಫಿಟ್ನೆಸ್ ಕುಶಾಲನಗರದ ಸ್ವಾಗತ್ ಸೋಮಣ್ಣ ಪಡೆದುಕೊಂಡರು.
ಮೋಸ್ಟ್ ಮಸ್ಕ್ಯೂಲರ್ ಮ್ಯಾನ್ ಪ್ರಶಸ್ತಿಯನ್ನು ನ್ಯೂಜೆನ್ ಫಿಟ್ನೆಸ್ ಕುಶಾಲನಗರದ ಅಪ್ಪಣ್ಣ ವಿ.ಪಡೆದರು. ಮಿಸ್ಟರ್ ಕೊಡಗು ಕ್ಲಾಸಿಕ್ ಪ್ರಶಸ್ತಿಯನ್ನು ಲೈಟ್ ವೈಟ್ ಫಿಟ್ನೆಸ್ ಕುಶಾಲನಗರದ ಪ್ರಕಾಶ್ ಹೆಚ್ ಆರ್ ಪಡೆದುಕೊಂಡರು. ಈ ಸಂದರ್ಭ ಆಯೋಜಕರಾದ ಸುಮೈರ್ ಕೆಜಿಎಸ್, ಪವನ್, ತೀರ್ಥ, ಅಪ್ಪಣ್ಣ ಹಾಗೂ ಹರ್ಷ ಹಾಜರಿದ್ದರು.