ಚೆಟ್ಟಳ್ಳಿ ಡಿ.6 NEWS DESK : ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ನಾಗರ ನೆಲೆಯಲ್ಲಿ ನಾಗರ ಪಂಚಮಿಯ ವಾರ್ಷಿಕ ಪೂಜೆ ಶ್ರದ್ದಾಭಕ್ತಿಯಿಂದ ಜರುಗಿತು. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿತು. ನಂತರ ಅರ್ಚಕರು ನಾಗರ ಕಲ್ಲಿಗೆ ಕ್ಷೀರಾಭಿಶೇಕ, ಪಾಯಸ, ಮಹಾಪೂಜೆ ಮಾಡಿದರು. ಕುಟುಂಬದ ಹಿರಿಯರಾದ ಪುತ್ತರಿರ ಗಣೇಶ್ ಭೀಮಯ್ಯ ಮಾತನಾಡಿ, ಪ್ರತೀ ವರ್ಷದಂತೆ ಷ್ರಷ್ಠಿ ಆಚರಣೆಗೆ ಮುಂಚಿತವಾಗಿ ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದ್ದು, ಎಲ್ಲರಿಗೂ ಒಳಿತನ್ನು ಮಾಡಲೆಂದು ಪ್ರಾರ್ಥಿಸಿದರು. ಇದೇ ಸಂದರ್ಭ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಗ್ರಾಮದ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.











