ಸುಂಟಿಕೊಪ್ಪ NEWS DESK ಡಿ.14: ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ “ಚಡ್ಡಿದೋಸ್ತ್’ ಬಳಗದ ವತಿಯಿಂದ ಆರನೇ ವರ್ಷದ ಸೌಹಾರ್ಧ ಕ್ರಿಕೆಟ್ ಟೂರ್ನಿಯು ಗುಡ್ಡೆಹೊಸೂರು ಐಎನ್‌ಎಸ್ ಅಕಾಡೆಮಿ ಮೈದಾನದಲ್ಲಿ ಡಿ.15ರಂದು ನಡೆಯಲಿದೆ. ಚಡ್ಡಿದೋಸ್ತ್ ಬಳಗದ ಸೌಹಾರ್ದ ಕ್ರಿಕೆಟ್ ಟೂರ್ನಿಯ ಉದ್ಘಾಟನೆಯನ್ನು ಗುಡ್ಡೆಹೊಸೂರು ಐಎನ್ಎಸ್ ಅಕಾಡಮಿಯ ಮಾಲೀಕರಾದ ಐಚೇಟ್ಟಿರ ಪೊನ್ನಪ್ಪ ಸೋಮಯ್ಯ ನೆರವೇರಿಸಲಿದ್ದಾರೆ. ಚಡ್ಡಿದೋಸ್ತ್ ಬಳಗ ಅಧ್ಯಕ್ಷ ಕೆ.ಕೆ.ಹರೀಶ್ ಮತ್ತು ಸ್ಥಾಪಕಾಧ್ಯಕ್ಷ ಎನ್.ಮೋಹನ್ ಉಪಸ್ಥಿತರಿರುವರು.
ಸಂಜೆ ನಡೆಯುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಮೆಟಿಲ್ಡ ಫಾಯಾಸ್ , ಲೀಲಾ, ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಶಿವಪ್ಪ,ಅನಿತಾ, ಮೈಸೂರು ಕೆ.ಆರ್.ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚಂದ್ರು, ಚಡ್ಡಿದೋಸ್ತ್ ಬಳಗದ ಸ್ಥಾಪಕಾಧ್ಯಕ್ಷ ಎನ್.ಮೋಹನ್ ಉಪಸ್ಥಿತರಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ.ಕೆ.ಹರೀಶ್ ವಹಿಸಲಿದ್ದಾರೆ.