ಮಡಿಕೇರಿ ಡಿ.19 NEWS DESK : ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಗುಂದ (ಹಾರಂಗಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಕುಶಾಲನಗರ ರೋಟರಿ ಸಂಸ್ಥೆಯ ವತಿಯಿಂದ ವಿವಿಧ ಪುಸ್ತಕಗಳು ಹಾಗೂ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ ವಿಕ್ರಮ್ ದತ್ತ ಶಾಲಾ ಮುಖ್ಯ ಶಿಕ್ಷಕಿರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ರಿತೀಶ್ ಬಾಳಿಗಾ, ಸಹಾಯಕ ಗೌರ್ನರ್ ಡಾ.ಹರೀಶ್ ಎ.ಶೆಟ್ಟಿ, ಕುಶಾಲನಗರ ರೋಟರಿ ಕ್ಲಬ್ ಅಧ್ಯಕ್ಷ ಸಿ.ಬಿ.ಹರೀಶ್, ಕಾರ್ಯದರ್ಶಿ ಡಿ.ಡಿ.ಕಿರಣ್, ಕೂಡಿಗೆ ಕ್ಲಸ್ಟರ್ ವಿಭಾಗದ ಸಿ.ಆರ್. ಪಿ. ಶಾಂತಕುಮಾರ್ ಸೇರಿದಂತೆ ಕುಶಾಲನಗರ ರೋಟರಿ ಕ್ಲಬ್ ನ ಸದಸ್ಯರು, ಶಾಲಾ ಶಿಕ್ಷಕರ ವೃಂದ ಹಾಜರಿದ್ದರು.