ಮಡಿಕೇರಿ ಡಿ.21 NEWS DESK : ಹಾಕತ್ತೂರು ಶಕ್ತಿ ಕೇಂದ್ರದ ನೂತನ ಪ್ರಮುಖ್ ಆಗಿ ಕುಂಜಿಲನ ಎಂ.ಮೋಹನ್, ಸಹ ಪ್ರಮುಖ್ ಆಗಿ ಸಿ.ವಿ.ಸುನೀಲ್ ಆಯ್ಕೆಯಾಗಿದ್ದಾರೆ. ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಶಕ್ತಿ ಕೇಂದ್ರದ ಪ್ರಮುಖರಾದ ಪಿ.ಪಿ.ಸುಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯನ್ನು ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾಂಗೀರ ಸತೀಶ್ ಹಾಗೂ ಹಾಕತ್ತೂರು ಶಕ್ತಿ ಕೇಂದ್ರದ ಉಸ್ತುವಾರಿಗಳಾದ ಮೇಕೇರಿಯ ಕಿರಣ ನಡೆಸಿಕೊಟ್ಟರು. ಸಭೆಯಲ್ಲಿ ಹಾಕತ್ತೂರು ಗ್ರಾ.ಪಂ ಅಧ್ಯಕ್ಷ ಯತೀಶ್, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ತೇಜಸ್ ನಾಣಯ್ಯ, ಹಾಗೂ ಬೂತ್ ಅಧ್ಯಕ್ಷರುಗಳಾದ ಎಂ.ಎ.ರಮೇಶ್, ಕುಂಟಿಕಾನ ಲಿತೀಶ್, ಮಾಜಿ ಅಧ್ಯಕ್ಷ ಸಜನ್, ಗ್ರಾ.ಪಂ ಸದಸ್ಯರಾದ ಪೊನ್ನಚ್ಚನ ಲೋಕೇಶ್, ಪಕ್ಷದ ಕಾರ್ಯಕರ್ತರು ಹಾಜರಿದ್ದರು.