ಮಡಿಕೇರಿ ಡಿ.25 NEWS DESK : ಕರ್ನಾಟಕ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಮಡಿಕೇರಿಯ ಕೊಡಗು ಗೌಡ ಸಮಾಜದ ಮೇಲಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪುಟಾಣಿಗಳ ಮೂಲಕ ಉದ್ಘಾಟಿಸಿ ಮಾತನಾಡಿದ ಅರೆಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ವಿದ್ಯಾ ಸಂಘದ ನಿರ್ದೇಶಕ ಸೂದನ ಎಸ್.ಈರಪ್ಪ ಅವರು, ಅರೆಭಾಷೆ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯದ ಕುರಿತು ಸಮಾಜದ ಬಂಧುಗಳು ಅರಿತುಕೊಳ್ಳಬೇಕು. ಈ ರೀತಿಯ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಲು ಮತ್ತು ಅರೆಭಾಷೆ ಐನ್‍ಮನೆ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಅರೆಭಾಷೆ ಅಕಾಡೆಮಿ ಸದಾ ಸಿದ್ಧವಿದೆ ಎಂದು ತಿಳಿಸಿದರು. ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ನವೀನ್ ಅಂಬೆಕಲ್ಲು ಮಾತನಾಡಿ ವಿದ್ಯಾ ಸಂಘದ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದರೂ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆನ್ನುವ ಉದ್ದೇಶದಿಂದ ಅರೆಭಾಷೆ ಅಕಾಡೆಮಿಯ ಸಹಕಾರದೊಂದಿಗೆ ಸ್ಪರ್ಧಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದರು. ವಿದ್ಯಾ ಸಂಘದ ಉಪಾಧ್ಯಕ್ಷ ಅಮೆ ಸೀತಾರಾಮ್, ಕಾರ್ಯದರ್ಶಿ ಪೇರಿಯನ ಉದಯ, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಹಾಗೂ ವಿದ್ಯಾ ಸಂಘದ ನಿರ್ದೇಶಕ ಚೊಕ್ಕಾಡಿ ಅಪ್ಪಯ್ಯ, ಜಂಟಿ ಕಾರ್ಯದರ್ಶಿ ತಳೂರು ದಿನೇಶ್ ಖಜಾಂಜಿ ಕಾಳೇರಮ್ಮನ ಲತಾ ನಂದಕುಮಾರ್ ಮತ್ತು ಸರ್ವ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿರಿಯರಾದ ಚೊಕ್ಕಾಡಿ ಪ್ರೇಮ ರಾಘವಯ್ಯ ಪ್ರಾರ್ಥಿಸಿದರು.
::: ಸ್ಪರ್ಧಾ ವಿಜೇತರು ::: ಅರೆಭಾಷೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯಲ್ಲಿ 1ರಿಂದ 4ನೇ ತರಗತಿವರೆಗೆ ಪ್ರಥಮ ಕೂಡಕಂಡಿ ಸನ್ನಿಧಿ, ದ್ವಿತೀಯ ಪೈಕೇರ ಲೋಚನ್ ಮಾದಪ್ಪ, ತೃತೀಯ ಇಂಚರ ಮೂಲೆಮಜಲು, 5ರಿಂದ 7ನೇ ತರಗತಿವರೆಗೆ ಪ್ರಥಮ ಪೈಕೇರ ಡೀನ್ ಮಾದಪ್ಪ, ದ್ವಿತೀಯ ಥನ್ವಿ ಪರಿವಾರನ, ತೃತೀಯ ಬಹುಮಾನವನ್ನು ಬಳಪದ ಲಕ್ಷಿತ ಪಡೆದುಕೊಂಡರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಪದವಿ ಪೂರ್ವ ಹಾಗೂ ಪದವಿ ವಿಭಾಗದಲ್ಲಿ ಪ್ರಥಮ ದಾಯನ ಹೆಲೀನಾ, ದ್ವಿತೀಯ ಕೊಂಪಳಿರ ಸಿಂಚನ, ತೃತೀಯ ಕುದುಪಜೆ ದಿಶಾ, ಸಾರ್ವಜನಿಕರ ವಿಭಾಗ ಪ್ರಥಮ ಕವನ ಮೂಲೆಮಜಲು, ದ್ವಿತೀಯ ನಡುಗದ್ದೆ ಜಯಂತಿ ರೋಹಿತ್, ತೃತೀಯ ಬಹುಮಾನವನ್ನು ಪುದಿಯನೆರವನ ಸ್ವಾತಿ ರಿಷಿತ್ ಪಡೆದುಕೊಂಡರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಕೂಡಕಂಡಿ ಅಶ್ವಿತ್ ನಾಗೇಶ್, ದ್ವಿತೀಯ ಪಟ್ಟಡ ಶಿಲ್ಪ, ತೃತೀಯ ಬಹುಮಾನವನ್ನು ದೇಶ್ಕೋಡಿ ಮಾನ್ಯ ದೇವಿ ಪ್ರಕಾಶ್ ಪಡೆದುಕೊಂಡರು.