ಸುಂಟಿಕೊಪ್ಪ ಡಿ.26 NEWS DESK : ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದ ಆವರಣದಲ್ಲಿ ರೂ 20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ದುರ್ಗಾಲಕ್ಷ್ಮಿ ದೇವಾಲಯದ ಪ್ರತಿಷ್ಠಾಪನಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಕೇರಳದ ತಳಿಪರಂಬ ಕಾಳೇಘಾಟ್ ಇಲ್ಲಂ ಮಧುಸೂಧನ್ ತಂತ್ರಿ ಮತ್ತು ತಂಡದವರು ದೇವಾಲಯಕ್ಕೆ ವಿವಿಧ ವಿಶೇಷ ಪೂಜಾ ಕೈಂಕರ್ಯಗಳನ್ನು ನೇರವೇರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ಐದು ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವದಲ್ಲಿ ಗಣಪತಿ ಹೋಮ, ತಿಲಾಹೋಮ, ಸಾಯುಜ್ಯಪೂಜೆ, ಪ್ರಸಾದಬಿಂಬ ಪರಿಗ್ರಹ, ಜಲಾದಿವಾಸ ಪುಣ್ಯಹಃ, ಪ್ರಸಾದಶುದ್ಧಿ, ಅಸ್ತ್ರಕಲಶಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ, ವಾಸ್ತುಕಲಶಾಭಿಷೇಕ, ಅತ್ತಾಯ ಪೂಜೆ ಮಹಾಮಂಗಳಾರತಿ ನೆರವೇರಿತು. ನಂತರ ಗಣಪತಿ ಹೋಮ, ಆದಿವಾಹನ ವಿಡರ್ತಿ ಪೂಜೆ, ಶ್ರೀ.ಅಯ್ಯಪ್ಪ ಸ್ವಾಮಿಯ ಬ್ರಹ್ಮಕಲಶ ಪೂಜೆ, ಶ್ರೀ ಭಗವತಿಯ ಬ್ರಹ್ಮಕಲಶ ಪೂಜೆ, ಶ್ರೀ ಗಣಪತಿಯ ಬ್ರಹ್ಮಕಲಶಾಭಿಷೇಕ, ಶ್ರೀ ಭಗವತಿಯ ಪ್ರಸಾದ ಪ್ರತಿಷ್ಟೆ ನೆರವೇರಿದ್ದು, ಶುಭ ಮುಹೂರ್ತ ಕುಂಭ ಲಗ್ನದಲ್ಲಿ ಶ್ರೀ ದುರ್ಗ ಲಕ್ಷ್ಮಿ ದೇವಿಯ ಪ್ರತಿಷ್ಟೆ, ನಿದ್ರಾಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಶ್ರೀ ಅಯ್ಯಪ್ಪಸ್ವಾಮಿಯ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಅಯ್ಯಪ್ಪಸ್ವಾಮಿಗೆ ತತ್ವಹೋಮ, ತತ್ವಕಲಶ ಪೂಜೆ, ತತ್ವ ಕಲಶಾಭಿಷೇಕ, ಶ್ರೀ ಭಗವತಿಯ ಶಯ್ಯಾ ಪೂಜೆ, ನಿದ್ರಾ ಕಲಶ ಪೂಜೆ, ಮಂಗಳಾರತಿ, ಬಿಂಬ ಶುದ್ಧಿ, ಕಲಶಪೂಜೆ, ಆದಿವಾಸ ಹೋಮ, ಮಂಡಲ ಪೂಜೆ, ಬಿಂಬ ಶುದ್ಧಿ, ಧ್ಯಾನಾಧಿವಾಸಂ, ಅತ್ತಾಯ ಪೂಜೆ ಮಹಾಮಂಗಳಾರತಿ ನಡೆಯಿತು. ಪ್ರತಿದಿನ ದೇವಾಲಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಾಸ್ಥಾನ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ಪುಟ್ಟ, ಉಪಾಧ್ಯಕ್ಷರುಗಳಾದ ಎಂ.ಮಂಜುನಾಥ್, ಬಿ.ಎ.ಪುನೀತ್, ಬಿ.ಕೆ.ಪ್ರಶಾಂತ್ ಕುಮಾರ್, ಬಿ.ಎಲ್.ಆನಂದ, ಪ್ರಧಾನ ಕಾರ್ಯದರ್ಶಿ ಎಂ.ಚಂದ್ರ, ಸಹ ಕಾರ್ಯದರ್ಶಿ ರಾಜು ವಿ.ಕೆ.ಕನಿಸ್.ಕೆ, ಮಣಿಕಂಠ, ಖಜಾಂಜಿ ಎಂ.ಆರ್.ಶಶಿಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಪಿ.ಆರ್.ಬಿಜು ಕುಮಾರ್,ಪೃಥ್ವಿರಾಜ್,ಡಿ.ಕೆ.ರಾಕೇಶ್, ಶೇಖರ್(ಅಣ್ಣು), ಎಂ.ಉದಯ ಕೆ.ರವಿ, ಬಿ.ಪಿ.ಸಜಿತ್,ಕೆ.ಕೆ.ವಾಸು ಸುನಿಲ್ ಸಿ.ಸಿ., ಗೌರವಧ್ಯಕ್ಷರುಗಳಾದ ಕೆ.ಎ.ಬಾಲಕೃಷ್ಣ (ಗುರುಸ್ವಾಮಿ), ಮುತ್ತಯ್ಯ, ಸುರೇಶ್ ಗೋಪಿ, ಧನುಕಾವೇರಪ್ಪ, ಸಲಹಾ ಸಮಿತಿ ಸದಸ್ಯರುಗಳಾದ ವಿ.ಎ.ಸಂತೋಷ್,ದಿನು ದೇವಯ್ಯ, ಪಿ.ಲೋಕೇಶ್,ಕೆ.ಪಿ.ವಿನೋದ್, ಎ.ಶ್ರೀಧರ್ ಕುಂಆರ್, ಅನೂಪ್ ಕುಮಾರ್, ಎ.ಶ್ರೀಧರನ್,ಶಿವಮಣಿ, ಸಿ.ಬಿ.ಚಂದ್ರಶೇಖರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎಂ.ಸುಬ್ರಮಣಿ,ಕೆ.ರವಿ,ಉಮೇಶ್, ಬಿ.ಆರ್.ಸತೀಶ್,ಬಸವರಾಜ್,ದೊರೆ, ಆರ್ ವಿಜಯ,ಚಂದ್ರ,ದಿನೇಶ್ ಬಿ.ಕೆ, ಆರ್.ಪ್ರಶಾಂತ್ ಸೇರಿದಂತೆ ಮತ್ತಿತರರು ಇದ್ದರು. ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಆವರಣವನ್ನು ವಿದ್ಯುತ್ ದೀಪಾ ಹಾಗೂ ಬಣ್ಣ ಬಣ್ಣ ಹೂಗಳಿಂದ ಸಿಂಗಾರಿಸಲಾಗಿತ್ತು. ಇಂದು (ಡಿ.26) ವಾರ್ಷಿಕ ಮಂಡಲಪೂಜಾ ಕಾರ್ಯಕ್ರಮ ಆಯೋಜಿಸಲಾಗಿದ್ದು, 11.30 ಗಂಟೆಗೆ ಅಯ್ಯಪ್ಪಸ್ವಾಮಿಗೆ ಲಕ್ಷಾರ್ಚನೆ, 12.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಲ್ಲಪೂಜೆ ಹಾಗೂ 1 ಗಂಟೆಗೆ ಮಹಾಪೂಜೆ ಮತ್ತು ಗಂಭೀರ ಪಟಾಕಿ ಸಿಡಿಸಲಾಗುವುದು. ವಿಶೇಷ ಪೂಜೆ ಬಿಲ್ವಪತ್ರೆ ಆರ್ಚನೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದೂರ್ವಾಚನೆ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ವಿಶೇಷವಾಗಿ ಸಂಜೆ 6.30ಕ್ಕೆ, ದೀಪಾರಾಧನೆ ಮತ್ತು ಮೆರವಣಿಗೆ 7.30ಕ್ಕೆ ದುರ್ಗಾಪೂಜೆ ನಡೆಯಲ್ಲಿದ್ದು, ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಬಿ.ಎಂ.ಸುರೇಶ್ ತಿಳಿಸಿದ್ದಾರೆ.