ನಾಪೋಕ್ಲು ಜ.3 NEWS DESK : ಮರಂದೋಡ ಗ್ರಾಮದ ಕೊಡವ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಅನ್ನಾಡಿಯಂಡ ದಿಲೀಪ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮರಂದೋಡ ಗ್ರಾಮದ ಕೊಡವ ಕುಟುಂಬಸ್ಥರು ವರ್ಷ ಪ್ರತಿ ನಡೆಸುವ ಪುತ್ತರಿ ಕೋಲ್ ಮಂದ್, ಈಡ್ ಮಂದ್‍ಗಳನ್ನು ಮುಂದಿನ ಯುವ ಪೀಳಿಗೆಗೆ ನಡೆಸಿಕೊಂಡು ಹೋಗುವಂತೆ ಕರೆ ನೀಡಲಾಯಿತು. ಪುತ್ತರಿ ಹಬ್ಬದಲ್ಲಿ ಮಂದ್ ಗೆ ತೆರಳುವಾಗ ಕೊಡವ ಸಂಪ್ರದಾಯದಲ್ಲಿ ಕಡ್ಡಾಯವಾಗಿ ಕುಪ್ಪಸ ಧರಿಸುವಂತೆ ನಿರ್ಣಯ ಮಾಡಲಾಯಿತು. ಮೃತಪಟ್ಟ ಸಂಘದ ಸದಸ್ಯರ ಕುಟುಂಬಕ್ಕೆ ರೂ.25,000 ನೀಡುವುದನ್ನು ರೂ. 30,000ಕ್ಕೆ ಹೆಚ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಮುಂದಿನ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಮರ್ಚಂಡ ದೇವಯ್ಯ, ಆಡಳಿತ ಮಂಡಳಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ, ಮರ್ಚಂಡ ಗಣೇಶ್ ಪೊನ್ನಪ್ಪ, ಊರಿನ ತಕ್ಕರಾದ ಮರ್ಚಂಡ ಅಯ್ಯಪ್ಪ, ಮೇರಿಯಂಡ ಸೋಮಯ್ಯ, ಚೋಯಮಾಡಂಡ ಗಣಪತಿ, ಅನ್ನಾಡಿಯಂಡ ಗಣಪತಿ, ಮರ್ಚಂಡ ತಿಮ್ಮಯ್ಯ, ಚೋಯಮಾಡಂಡ ಪೂಣಚ್ಚ ಪುತ್ತರಿ ಹಬ್ಬದ ಆಚಾರ, ವಿಚಾರ, ಸಂಸ್ಕೃತಿ, ಮಂದ್ ಮಾನಿಗಳ ಅಭಿವೃದ್ಧಿ ಬಗ್ಗೆ ಮಾತನಾಡಿದರು.
ವರದಿ : ದುಗ್ಗಳ ಸದಾನಂದ.