ಕಡಂಗ ಜ.3 NEWS DESK : ಮಡಿಕೇರಿ ತಾಲ್ಲೂಕಿನ ಅರಪಟ್ಟು ಗ್ರಾಮದ ಶ್ರೀ ಭಗವತಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಚಂಡಿಕಾ ಹೋಮ, ಸುಹಾಸಿನಿ ಪೂಜೆ, ದ್ವದಶ ಮೂರ್ತಿ ಆರಾಧನೆ ಪೂಜೆಗಳು ನೆರವೇರಿತು. ಅರಪಟ್ಟು ಪೂದವಾಡ ಗ್ರಾಮಸ್ಥರು, ದೇವಸ್ಥಾನದ ತಕ್ಕರು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ 2008 ರಿಂದ ಶ್ರೀ ಭಗವತಿ ಶ್ರೀ ಪಟ್ಟೋಟು ಈಶ್ವರ ಶ್ರೀ ಮಂದಣ ಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠ ಜೀರ್ಣೋದ್ಧಾರ ಹಾಗೂ ಇನ್ನಿತರ ಕಾರ್ಯಗಳಲ್ಲಿ ಜ್ಯೋತಿಷ್ಯ ಸಲಹೆ ಸೂಚನೆಗಳನ್ನು ನೀಡುವುದರ ಮುಖಾಂತರ ದೇವಸ್ಥಾನದ ಅಭಿವೃದ್ಧಿಗೆ ಪಾತ್ರರಾದ ಕಕ್ಕಬ್ಬೆ ಅಮ್ಮಂಗೇರಿ ಕಣಿಯರ ಕುಟುಂಬದ ಜ್ಯೋತಿಷಿ ಹಾಗೂ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಜ್ಯೋತಿಷಿಗಳಾದ ಶ್ರೀ ಶಶಿಕುಮಾರ್ ಪಂಡಿತ್ ಅವರಿಗೆ ಊರಿನವರು ಹಾಗೂ ಆಡಳಿತ ಮಂಡಳಿ ಸದಸ್ಯರು ದೇವಸ್ಥಾನದ ಸನ್ನಿಧಿಯಲ್ಲಿ ಸನ್ಮಾನಿಸಿ ಗೌರವಿಸಿದರು.
ವರದಿ : ನೌಫಲ್