ವಿರಜಪೇಟೆ ಜ.9 NEWS DESK : ವಿರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ‘ಗ್ರಾಮಸ್ಥರಿಗೆ ಹೈನುಗಾರಿಕೆ ಮಾಹಿತಿ ಕಾರ್ಯಕ್ರಮ ನಡೆಯಿತು. ಮೂರ್ನಾಡು ವಲಯದ ಕಿಗ್ಗಾಲು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕಿಗ್ಗಾಲು ಅಶೋಕ್ ಭಟ್ ಮಾತನಾಡಿ, ಪ್ರಗತಿಪರ ಕೃಷಿಕರು ಹೈನುಗಾರಿಕೆ ಮಾಡುವುದರಿಂದ ಹೆಚ್ಚು ಲಾಭದಾಯಕವಾಗಿದೆ. ಇದರಿಂದ ರೈತರು ಜೀವನ ನಿರ್ವಹಣೆ ಮಾಡಬಹುದು. ಹೈನುಗಾರಿಕೆಯಲ್ಲಿ ಹಲವು ರೀತಿಯ ತಳಿಯ ಹಸುಗಳ ಬಗ್ಗೆ, ಜೈವಿಕ ಗೊಬ್ಬರಗಳ ಬಗ್ಗೆ, ಬೀಜಾಮೃತ ಮತ್ತು ಜೀವಾಮೃತ ನೈಸರ್ಗಿಕ ಕೃಷಿಯಲ್ಲಿ ಜಾನುವಾರಗಳ ಇವುಗಳ ಬಗ್ಗೆ ಉತ್ತಮ ಮಾಹಿತಿ, ಮಾರ್ಗದರ್ಶನ ನೀಡಿದರು. ಕಿಗ್ಗಾಲು ಗ್ರಾಮದ ರೈತ ಮಹಿಳೆಯರಾದ ಲೀಲಾವತಿ ಮತ್ತು ಆಶಾ ಅವರು ಹೈನುಗಾರಿಕೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಪಿ.ಕೆ.ಗೌರಿ, ಕೃಷಿ ಮೇಲ್ವಿಚಾರಕರಾದ ವಸಂತ್, ಸೇವಾ ಪ್ರತಿನಿಧಿ ದಿವ್ಯ ಹಾಗೂ ಗ್ರಾಮಸ್ಥರು, ಸಂಘದ ಸದಸ್ಯರು ಈ ಭಾಗವಹಿಸಿದ್ದರು.