ಮಡಿಕೇರಿ NEWS DESK ಜ.19 : ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಆರ್.ಸುನಿಲ್ ರಾವ್ ಹಾಗೂ ಉಪಾಧ್ಯಕ್ಷರಾಗಿ ತಮ್ಮಯ್ಯ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಪಿ.ಬಿ.ಮೋಹನ್ ಕಾರ್ಯನಿರ್ವಹಿಸಿದರು. ಎಸ್. ಆರ್.ಸುನಿಲ್ ರಾವ್ ಮಾತನಾಡಿ ಮುಂಬರುವ ದಿನಗಳಲ್ಲಿ ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉತ್ತಮ ರೀತಿಯಲ್ಲಿ ಬೆಳೆಸಿ ಗ್ರಾಮೀಣ ಜನತೆಗೆ ಅನುಕೂಲ ಒದಗಿಸುವುದರೊಂದಿಗೆ ಸಹಕಾರ ಸಂಘದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು. ನಿರ್ದೇಶಕರಾದ ವೆಂಕಟಯ್ಯ ನಾಯಕ, ಎಚ್ ಆರ್ ಕೃಷ್ಣ, ಸುರೇಶ್, ವಿ ಪಿ, ವಸಂತ, ಬಿ.ಎ. ಮಂಜುಳಾ, ಗಾಯತ್ರಿ, ಕೆ.ಕೆ. ಚಂದ್ರಿಕಾ, ದೇವಿರಮ್ಮ, ಗಿರಿಜಾ ವೈ.ಆರ್, ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯೋಗೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎಸ್.ಶಿವಕುಮಾರ್, ಅರುಣ್ ರಾವ್, ಮಾದಪ್ಪ, ಬಾಪು ಹಾಗೂ ಸಂಘದ ಸದಸ್ಯರು ಹಾಜರಿದ್ದರು.