ಮಡಿಕೇರಿ ಜ.24 NEWS DESK : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 32,438 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗೆ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಅರ್ಜಿ ಆಹ್ವಾನಿಸಲಾಗಿದೆ. 10 ನೇ ತರಗತಿ ತೇರ್ಗಡೆಯಾಗಿರುವ 18 ರಿಂದ 36 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಫೆಬ್ರವರಿ, 22 ರವರೆಗೆ (23.1.2025 ರಿಂದ 22.2.2025 ರವರೆಗೆ) ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ರೈಲ್ವೆ ನೇಮಕಾತಿ ಪರೀಕ್ಷೆ ಹಾಗೂ ಇತರ ನೇಮಕಾತಿ ಪರೀಕ್ಷೆಗಳಿಗೆ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್ ನಲ್ಲಿ ನುರಿತ ವಿಷಯ ತಜ್ಞರಿಂದ ರಿಯಾಯಿತಿ ದರದಲ್ಲಿ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 8660217739 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಬಹುದು ಎಂದು ಶಾಖೆಯ ಗೌರವ ಕಾರ್ಯದರ್ಶಿ ಎಚ್.ಪಿ.ಮೋಹನ್ ಅವರು ತಿಳಿಸಿದ್ದಾರೆ.