ಮಡಿಕೇರಿ ಫೆ.1 NEWS DESK : ಸುಂದರ ಕೊಡಗು ನಿರ್ಮಾಣ ಮಾಡುವಲ್ಲಿ ಸಾರ್ವಜನಿಕರು ಕೈಜೋಡಿಸಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು. ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ವತಿಯಿಂದ ವಿರಾಜಪೇಟೆಯಲ್ಲಿ ನಡೆದ ಪರಿಸರ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು. ರಕ್ಷಣಾ ಹೋರಾಟ ಸಮಿತಿಯ ಕಾರ್ಯ ಶ್ಲಾಘನೀಯ.
ಪರಿಸರಸ್ವಚ್ಛ ಹಾಗೂ ಪರಿಶುದ್ಧ ಕೊಡಗು ಜಿಲ್ಲೆಯ ಪರಿಕಲ್ಪನೆ ಈಡೇರಲು ಎಲ್ಲರ ಸಹಕಾರ ಅತಿ ಮುಖ್ಯ ಎಂದರು. ಪರಿಸರ ಎಂದರೆ ಭೂ ದೇವಿಯ ಮಡಲಿನ ನೀರು, ಗಾಳಿ ಹಾಗೂ ಇನ್ನಿತರ ಎಲ್ಲಾ ಪ್ರಾಕೃತಿಕ ವಿಷಯಗಳಲ್ಲೂ ಸ್ವಚ್ಛತೆ ಕಾಪಾಡುವುದರ ಮೂಲಕ ಜನರ ಆರೋಗ್ಯಕ್ಕೆ ಮತ್ತು ಸುಂದರ ಕೊಡಗು ನಿರ್ಮಾಣ ಮಾಡುವಲ್ಲಿ ಹಾಗೂ ಆಧುನಿಕ ಯುಗಕ್ಕೆ ಜನ ಮಾರುಹೋದರೂ ಸ್ವಚ್ಛತೆ ಬಗ್ಗೆ ಸದಾ ಗಮನದಲ್ಲಿ ಇಟ್ಟುಕೊಂಡು ಪರಿಸರವನ್ನು ಸಂರಕ್ಷಿಸುವಲ್ಲಿ ಸಾರ್ವಜನಿಕರು ಕೈಜೋಡಿಸಬೇಕೆಂದು ಕರೆ ನೀಡಿದರು.