ಕುಶಾಲನಗರ NEWS DESK ಫೆ.9 : ಕುಶಾಲನಗರದ ರಥ ಬೀದಿಯಲ್ಲಿರುವ ಗೋಲ್ಡನ್ ಟೆಂಪಲ್ ಎಂದೇ ಖ್ಯಾತಿ ಗಳಿಸಿರುವ ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ 11 ನೇ ವಾರ್ಷಿಕೋತ್ಸವ ಫೆ.11 ರಂದು ನಡೆಯಲಿದೆ ಎಂದು ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ನ ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್ ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ 6.30 ಕ್ಕೆ ವಾಸವಿ ಸುಪ್ರಭಾತ, 7.30 ಕ್ಕೆ ದೇವತಾ ಪ್ರಾರ್ಥನೆ, ಮಹಾಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಗೋ ಪೂಜೆ, ಧ್ವಜಾರೋಹಣ, ಕಳಸ ಸ್ಥಾಪನೆ, ಪಂಚಾಮೃತ ಅಭಿಷೇಕ, 9 ಗಂಟೆಗೆ ಚಂಡಿಕಾ ಹೋಮ, ಕಲಾತ್ವತ ಹೋಮ, ಕಳಸ ಪೂಜೆ, 1 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ ದೇವಸ್ಥಾನದ ಅರ್ಚಕರಾದ ಗಿರೀಶ್ ಭಟ್ ಮತ್ತು ಯೋಗೀಶ್ ಭಟ್ ನೇತೃತ್ವದಲ್ಲಿ ನಡೆಯಲಿದೆ. ಸಂಜೆ 6 ಗಂಟೆಯಿಂದ 7 ಗಂಟೆ ವರೆಗೆ ಆರ್ಯವೈಶ್ಯ ಮಹಿಳಾ ಮಂಡಳಿ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್ ತಿಳಿಸಿದ್ದಾರೆ. 7 ಗಂಟೆಯ ನಂತರ ದೀಪಾರಾಧನೆ, ಪ್ರಾಕಾರೋತ್ಸವ, ಮಹಾಪೂಜೆ, ಅಷ್ಟಾವಧಾನ, ಮಂತ್ರ ಪುಷ್ಪ, ಆಶೀರ್ವಾದದೊಂದಿಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.











