ವಿರಾಜಪೇಟೆ ಫೆ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ಬಿಸಿ ಟ್ರಸ್ಟ್ ವತಿಯಿಂದ ನೆಲ ಜಲ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ ಪೊನ್ನಂಪೇಟೆ ವಲಯದ ಅರವತ್ತೊಕ್ಲು ಕಾರ್ಯಕ್ಷೇತ್ರದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಂತ ಅಂತೋಣಿ ಪ್ರೌಢಶಾಲೆ ಸಹ ಶಿಕ್ಷಕಿ ಬೆಂಜಂಡ ರಶ್ಮಿ ದೇವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೆಲ-ಜಲ ಸಂರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೂ ನೀರು ಕೊಡುವ ಯೋಜನೆ ಇದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನೆಲ ಜಲ ಸಂರಕ್ಷಣೆ ಪರಿಸರ ಸಂರಕ್ಷಣೆಯ ಅಂಶವಾಗಿದೆ. ನೆಲ ಸಂರಕ್ಷಣೆಯು ಮಣ್ಣಿನ ಸಾರವನ್ನು ಉಳಿಸುವುದು, ನೀರಾವರಿ ಮತ್ತು ನೀರು ಸಂಗ್ರಹಣೆಯನ್ನು ಉತ್ತೇಜಿಸುವುದು, ಮಣ್ಣಿನ ಕ್ಷಯ ಮತ್ತು ಮಾಲಿನ್ಯವನ್ನು ತಡೆಯುವ ಬಗ್ಗೆ ಉತ್ತಮ ಮಾಹಿತಿ ಮಾರ್ಗದರ್ಶನ ನೀಡಿದರು. ಕೃಷಿ ಮೇಲ್ವಿಚಾರಕರಾದ ವಸಂತ್ ನೆಲ ಜಲ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರಾದ ಗಣೇಶ್ ಹಾಗೂ ಪದಾಧಿಕಾರಿಗಳಾದ ಪಿ.ಕೆ.ರೇಷ್ಮಾ, ಶೋಭ ಮೋಹನ್, ಶಕುಂತಲಾ, ಸೇವಾ ಪ್ರತಿನಿಧಿ ರೋಹಿಣಿ ಮತ್ತು ಊರಿನ ಗ್ರಾಮಸ್ಥರು ಸಂಘದ ಸದಸ್ಯರು ಉಪಸ್ಥಿತರಿದ್ದರು.











