


ಸಿದ್ದಾಪುರ ಫೆ.17 NEWS DESK : ಪುಲಿಯೇರಿ ಶ್ರೀ ಮಂಗುಯಿಲ್ ಭಗವತಿ ಕ್ಷೇತ್ರದ 3ನೇ ವಾರ್ಷಿಕ ಮಹೋತ್ಸವ ಕಾರ್ಯಕ್ರಮವು ಫೆ.26 ರಿಂದ ಮಾ. 2 ರವರೆಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಎಂ.ಟಿ.ಶಶಿ. ಫೆ.26 ರಂದು ಶುದ್ದಿಪೂಜೆ ಆಚಾರ್ಯವರಣಂ, ದೀಪಾರಾಧನೆ, ಫೆ.27 ರಂದು ಗಣಪತಿ ಹೋಮ ,ಉಷಾಪೂಜೆ, ಮಹಾಪೂಜೆ, ಕಲಶ ಪೂಜೆ, ಭಗವತಿ ಪೂಜೆ, ಅತ್ತಾಯ ಪೂಜೆ. ಫೆ.28 ರಂದು ದೀಪಾರಾಧನೆ, ಸರ್ವ ಐಶ್ವರ್ಯ ಪೂಜೆ, ಮಾ.1ರಂದು ಲಲಿತ ಸಹಸ್ರನಾಮಾರ್ಚ, ಮಹಾ ಪೂಜೆ ನಡೆಯಲಿದೆ. ಮಾ.2ರಂದು ಉತ್ಸವದ ಕೊನೆಯ ದಿನವಾಗಿದ್ದು ಮಹಾ ಗಣಪತಿ ಹೋಮ, ದೇವಿಗೆ ಮಹಾ ಪೊಂಗಾಲ, ಮಹಾಕುರುದಿ, ಮಹಾಪೂಜೆ, ನಂತರ ಚಂಡೆವಾಗಳೊಂದಿ ಅಲಂಕೃತ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಇರಿಸಿ ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ಕಾವೇರಿ ನದಿಯಲ್ಲಿ ದೇವಿ ಆರಾಟ್ ನಡೆಯಲಿದು ಮಂಗುಯಿಲ್ ಭಗವತಿ ಕ್ಷೇತ್ರದವರೆಗೆ ಶೋಭಾಯಾತ್ರೆ ನಡೆಯಲಿದೆ. ಫೆ.8 ಗಂಟೆಗೆ ಮಹಾ ಪೂಜೆ ಮತ್ತು ದೇವಿಗೆ ಮಹಾ ಮಂಗಳಾರತಿ ಯೊಂದಿಗೆ ವಾರ್ಷಿಕೋತ್ಸವಕ್ಕೆ ತೆರೆ ಬೀಳಲಿದೆ ಎಂದರು. ಮಂಗುಯಿಲ್ ಶ್ರೀ ಭಗವತಿ ಕ್ಷೇತ್ರದ. ವಾರ್ಷಿಕ ಮಹೋತ್ಸವದ ಪ್ರಯುಕ್ತ ಐದು ದಿನಗಳ ಕಾಲ ಅನ್ನ ಸಂತರ್ಪಣೆ ನಡೆಯಲಿದೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮಂಡಳಿ ಕೋರಿದೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶೀಲ, ಖಜಾಂಚಿ ಅಭಿಜಿತ್, ಸದಸ್ಯರಾದ ರತೀಶ್, ಪ್ರದೀಪ್, ಮಿನಿಮೋಹನ್, ಶೈಲಾಮಣಿ, ದನೀಶ್, ನಿತೀಶ್ ಹಾಜರಿದ್ದರು.