


ಕುಶಾಲನಗರ ಮಾ.12 NEWS DESK : ಜಂಪ್ ಸ್ಮಾಶ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗೋಲ್ಡನ್ ರಾಕೆಟ್ಸ್ ತಂಡ ಮೊದಲ ಬಹುಮಾನ 30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು. ಟೀಂ ಆಯುಧಿ ತಂಡ ಎರಡನೇ ಬಹುಮಾನ 20 ಸಾವಿರ ಹಾಗೂ ಟ್ರೋಫಿ ಪಡೆಯಿತು. ಸೂಪರ್ ಮಾಸ್ಟರ್ಸ್ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು 10 ಸಾವಿರ ನಗದು ಹಾಗೂ ಟ್ರೋಫಿ ಗಳಿಸಿತು. ಪಂದ್ಯಾವಳಿಯಲ್ಲಿ ಟೀಂ ಐಬಿ, ಟೀಂ ವಿಶಾಲ್, ಗೋಲ್ಡನ್ ರಾಕೆಟರ್ಸ್, ಸೂಪರ್ ಮಾಸ್ಟರ್ಸ್, ಟೀಂ ಎಇ, ಜಂಪ್ ಸ್ಮಾಶ್, ಟೀಂ ಆಯುಧಿ ಸೇರಿ ಒಲ ಏಳು ತಂಡಗಳಿಂದ ಒಟ್ಟು 77 ಆಟಗಾರರು ಭಾಗವಹಿಸಿದ್ದರು. ಪಂದ್ಯಾವಳಿ ಆಯೋಜಿಸಿದ್ದ ಹಿರಿಯ ಆಟಗಾರರೂ ಹಾಗೂ ಗೋಲ್ಡನ್ ರಾಕೆಟರ್ಸ್ ತಂಡದ ಮಾಲೀಕರಾದ ಸೋಮು ಹಾಗೂ ನಿರಂಜನ್ ಈ ಸಂದರ್ಭ ಮಾತನಾಡಿ, ಯಾವುದೇ ಕ್ರೀಡೆಯಾಗಲೀ ಸೋಲು ಅಥವಾ ಗೆಲುವು ಇದ್ದದ್ದೇ. ಆದರೆ ಸೋತವರು ಮತ್ತೆ ಗೆಲ್ಲುವ ಉತ್ಸಾಹದಲ್ಲಿರಬೇಕು. ಗೆದ್ದವರು ಗೆದ್ದೇ ಎಂದು ಬೀಗದೇ ಸ್ನೇಹ ಹಾಗೂ ವಿಶ್ವಾಸಕ್ಕೆ ಬಾಗಬೇಕು. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಗೆ ಸಹಕಾರಿಯಾಗುತ್ತದೆ ಎಂದರು. ಟೀಂ ಆಯುಧಿ ತಂಡದ ಮಾಲೀಕ ಅಭಿ, ಸೂಪರ್ ಮಾಸ್ಟರ್ಸ್ ತಂಡದ ಮಾಲೀಕ ರವಿ ಹಾಗೂ ಲೋಕೇಶ್, ಮಾರ್ಟಿನ್, ವಿಮಲ್, ಜಯರಾಜ್, ನವೀನ್,ಹರೀಶ್, ಚಂದ್ರು, ಆಕಾಶ್, ಆನಂದ್, ಅನೂಜ್, ರಾಜೇಶ್, ಕಾನೆಹಿತ್ಲು ಪ್ರಸನ್ನ, ಪಾಣತ್ತಲೆ ಗಿರೀಶ್ ಮೊದಲಾದವರಿದ್ದರು.