


ಮಡಿಕೇರಿ ಮಾ.12 NEWS DESK : ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೋಟೇರಿ ಯಿಂದ ತುತ್ತಂಡವಾರಿಕೆಗೆ ಇರುವ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಿಂದ ಮೊದಲ ಬಾರಿಕೆ ಅಂಗನವಾಡಿಯಿಂದ ಚಿಂಡಮಾಡ್ ಮಸೀದಿವರೆಗೂ ಸುಮಾರು ರೂ.15 ಲಕ್ಷ ದಲ್ಲಿ ಕಾಮಗಾರಿ ಕೈಗೊಳ್ಳಲಾಯಿತು. ಈಗಾಗಲೇ ಡಾಂಬರೀಕರಣ ಪ್ರಾರಂಭವಾಗಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ವಲಯ ಅಧ್ಯಕ್ಷ ಕುಸು ಕುಶಾಲಪ್ಪ, ಕೊಳಕೇರಿ ಗ್ರಾ.ಪಂ ಸದಸ್ಯ ಕೆ.ವೈ.ಅಶ್ರಫ್, ಹೇಮಾ, ಅರುಣ್ ಬೇಬ, ಗಂಗಮ್ಮ, ಎಂ.ಎಂ.ಅಮೀನ ಹಾಗೂ ನಾಪೋಕ್ಲು, ಕೊಳಕೇರಿಯ ಉಲಮ ನೇತಾರರಾದ ಅಫೀಲ್ ಸಹದಿ ಉಸ್ತಾದ್, ಕಾಂಗ್ರೆಸ್ ಮುಖಂಡರಾದ ಹಾರೀಶ್ ಕೆ.ಎ., ಊರಿನ ಗಣ್ಯ ವ್ಯಕ್ತಿಗಳು, ಉಂಬಯಿ ಹಳೆ ತಾಲೂಕು ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದ ಶಾಸಕ ಪೊನ್ನಣ್ಣ ಹಾಗೂ ಸಹಕರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದರು.