


ಮಡಿಕೇರಿ ಮಾ.12 NEWS DESK : ಗೋಣಿಕೊಪ್ಪ-ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಅರುವತ್ತೊಕ್ಲು ಕಾಡ್ಲ್ ಅಯ್ಯಪ್ಪ ದೇವರ ವಾರ್ಷಿಕ ಉತ್ಸವವು ಮಾ.15 ಮತ್ತು 16 ರಂದು ನಡೆಯಲಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಡ್ಯಮಾಡ ಪ್ರೀತ್ ತಿಳಿಸಿದ್ದಾರೆ. ಉತ್ಸವಕ್ಕೆ ಫೆ.26 ರಂದು ಸಂಜೆ ಚಾಲನೆ ದೊರೆತಿದ್ದು, ಮಾ.1 ರಿಂದ ಊರಿನಲ್ಲಿ ದೇವರ ವಿವಿಧ ಕಟ್ಟುಪಾಡುಗಳನ್ನು ಆಚರಿಸಲಾಗುತ್ತಿದೆ. ಮಾ.15 ರಂದು ಸಂಜೆ ತಕ್ಕಮುಖ್ಯಸ್ಥರಾದ ಕಾಡ್ಯಮಾಡ ಐನ್ ಮನೆಯಿಂದ ಭಂಡಾರ ತರುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ವಿವಿಧ ಆಚರಣೆಯೊಂದಿಗೆ 15 ರಂದು ರಾತ್ರಿ ಹಬ್ಬ ನಡೆದು, 16 ರಂದು ಬೆಳಿಗ್ಗೆ 8 ಗಂಟೆಗೆ ಬೆಂಕಿ ಕೊಂಡ ಹಾಯುವ ಕಾರ್ಯಕ್ರಮ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.