


ಮಡಿಕೇರಿ NEWS DESK ಮಾ.12 : ಕೊಡಗು ಜಿಲ್ಲೆಯಲ್ಲೇ ಮಾದರಿ ರಾಮೋತ್ಸವವನ್ನು ಆಚರಿಸಲು ಮಡಿಕೇರಿಯ ಶ್ರೀ ಕೋದಂಡ ರಾಮೋತ್ಸವ ಸಮಿತಿ ತಯಾರಿ ನಡೆಸಿದೆ. ಏ.5 ಮತ್ತು 6ರಂದು ಅದ್ಧೂರಿಯಾಗಿ ರಾಮೋತ್ಸವ ನಡೆಯಲಿದ್ದು, ಮೆರವಣಿಗೆ ಸಮಿತಿಯ ಅಧ್ಯಕ್ಷರಾಗಿ ಪರಮೇಶ್, ಮಲ್ಲಿಕಾರ್ಜುನ ನಗರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಜ್ಞ ಜಿ.ಆರ್, ಪ್ರಶಾಂತ್, ಅಭಿಷೇಕ್, ಪ್ರಧಾನ ಕಾರ್ಯದರ್ಶಿಯಾಗಿ ಗೋಪಿನಾಥ್, ಕಾರ್ಯದರ್ಶಿಯಾಗಿ ಚಂದ್ರಶೇಖರ್, ಖಜಾಂಚಿಯಾಗಿ ಕುಶಾಲ್, ಗೌರವಾಧ್ಯಕ್ಷರಾಗಿ ಅರುಣ್ ಶೆಟ್ಟಿ, ಜಯಂತಿ ಆರ್.ಶೆಟ್ಟಿ, ಮಿಥುನ್ ಶೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಮದನ್, ಗಣೇಶ್, ಶರತ್, ಸಂಪತ್, ಸಂಚಾಲಕರಾಗಿ ಕುಮಾರ್ ಮೇಕೇರಿ, ಸಂಘಟನಾ ಕಾರ್ಯದರ್ಶಿ ಚರಣ್, ಸದಸ್ಯರಾಗಿ ಸತೀಶ್, ಸುರೇಶ್ ಟಿ.ಆರ್, ಧನಂಜಯ ಆಚಾರ್ಯ, ಬಾಲಕೃಷ್ಣ, ಕಿಶೋರ್, ರವಿಕಿರಣ್, ಧ್ರುವ, ಚಂದ್ರು, ಅಭಿಷೇಕ್, ಸಲಹೆಗಾರರಾಗಿ ಟ್ರಸ್ಟ್ ನ ಅಧ್ಯಕ್ಷ ಹೆಚ್.ಎನ್.ನಂಜುಂಡ, ತಿಮ್ಮಯ್ಯ, ಜಿ.ರಾಜೇಂದ್ರ, ಹೆಚ್.ಮಂಜುನಾಥ್ ಕಾರ್ಯನಿರ್ವಹಿಸಲಿದ್ದಾರೆ.