


ಮಡಿಕೇರಿ ಮಾ.21 NEWS DESK : ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸುಗಮ ಸಂಚಾರಕ್ಕೆ ಖಾಸಗಿ ಬಸ್ ಮಾಲೀಕ ತಿತಿಮತಿಯಿಂದ ಖಾಸಗಿ ಬಸ್ ವ್ಯವಸ್ಥೆ ಕಲ್ಪಿಸಿದ್ದು, ವಿದ್ಯಾರ್ಥಿಗಳ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಬಾಳೆಲೆ, ಪೊನ್ನಪ್ಪಸಂತೆ, ಮಾಯಮುಡಿ ಭಾಗದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ತಿತಿಮತಿ ಪರೀಕ್ಷಾ ಕೇಂದ್ರದಿಂದ ಶೀಘ್ರವಾಗಿ ಮನೆಗೆ ತಲುಪಲು ಜಯಲಕ್ಷ್ಮಿ ಬಸ್ ಮಾಲಿಕ ಕಾಡೇಮಾಡ ಗೌತಮ್ ವಿಶೇಷ ಖಾಸಗಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಲಾಭಕ್ಕಾಗಿ ರಾಜಕೀಯ ಪಕ್ಷಗಳು ನಡೆಸುವ ಕಾರ್ಯಕ್ರಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವವರ ಮಧ್ಯೆ ಮಕ್ಕಳ ಭವಿಷ್ಯವನ್ನು ಮುಂದಿಟ್ಟುಕೊಂಡು ಈ ರೀತಿಯ ಸೇವೆ ನೀಡುವ ಬಸ್ ಮಾಲೀಕರ ಸೇವೆ ಶ್ಲಾಘನೀಯ ಎಂದು ಗಿರಿಜನ ಮುಖಂಡ ಕಾಳ ಕಾರ್ಮಾಡು ಬಸ್ ಮಾಲೀಕರ ಸೇವೆಗೆ ಅಭಿನಂದನೆ ಸಲ್ಲಿಸಿದ್ದಾರೆ.