


ಮಡಿಕೇರಿ ಮಾ.21 NEWS DESK : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಇಂದಿನಿಂದ ಆರಂಭಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು 6444 ಮಂದಿ ಎದುರಿಸಿದ್ದು, 161 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮಡಿಕೇರಿ ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ 1797 ಮಕ್ಕಳು ಹಾಜರಾಗಿದ್ದರೆ, 22 ಮಂದಿ ಗೈರು ಹಾಜರಾಗಿದ್ದರು. ಸೋಮವಾರಪೇಟೆ ತಾಲ್ಲೂಕಿನ 11 ಪರೀಕ್ಷಾ ಕೇಂದ್ರಗಳಲ್ಲಿ 2664 ಮಕ್ಕಳು ಪರೀಕ್ಷೆ ಬರೆದರೆ, 86 ಮಕ್ಕಳು ಗೈರು ಹಾಜರಾಗಿದ್ದರು. ವಿರಾಜಪೇಟೆ ತಾಲ್ಲೂಕಿನ 8 ಪರೀಕ್ಷಾ ಕೇಂದ್ರದಲ್ಲಿ 1983 ಮಕ್ಕಳು ಪರೀಕ್ಷೆ ಬರೆದರೆ, 53 ಮಂದಿ ಗೈರು ಹಾಜರಾಗಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖಾ ಉಪನಿರ್ದೇಶಕರು ತಿಳಿಸಿದ್ದಾರೆ.