


ಮಡಿಕೇರಿ ಮಾ.29 NEWS DESK : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ 2024-25ನೇ ಸಾಲಿನ ಕಿಂಡರ್ ಗಾರ್ಟನ್ ವಿಭಾಗದ ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚೌರಿರ ರಿಷಿ ಕಾಶ್ಯಾಮ್ಕಿಂಡರ್ ಯುಕೆಜಿ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಮಾತನಾಡಿ, ಶಿಕ್ಷಕರು ಪೋಷಕರು ಮಕ್ಕಳು ಇವರು ಮೂವರು ತ್ರಿಕೋನದಂತೆ ಒಬ್ಬರ ಸಂಬಂಧ ಇನ್ನೊಬ್ಬರೊಂದಿಗೆ ತುಂಬಾ ಗಾಢವಾಗಿರುತ್ತದೆ, ಮಕ್ಕಳ ಲಾಲನೆ ಪಾಲನೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲೆ ಎಂ.ಜಿ.ಸವಿತ, ಪ್ರತಿಯೊಂದು ಮಗುವಿನಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರಗಿಡುವಲ್ಲಿ ಶಿಕ್ಷಕರಪಾತ್ರ ಪ್ರಮುಖ ಎಂದರು. ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಎನ್.ಎಪೊನ್ನಮ್ಮ ಉಪಸ್ಥಿತರಿದ್ದರು. ಗಾರ್ಟನ್ ವಿಭಾಗದ ಶಿಕ್ಷಕಿ ವಿನ್ಯಾ ಉತ್ತಪ್ಪ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಬಿ.ಎಸ್.ಚಂದ್ರಾವತಿ ವರದಿ ವಾಚಿಸಿದರು. ಮಿಥಿಲ ಪೊನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಎ.ಎಂ.ಹರ್ಷಿತಾ ವಂದಿಸಿದರು. ಪುಟಾಣಿಗಳು ತಮ್ಮ ಅನಿಸಿಕೆಯಲ್ಲಿ ತಮ್ಮ ಶಿಕ್ಷಕಿಯರನ್ನು ನೆನಪಿಸಿಕೊಂಡರು. ಪುಟಾಣಿಗಳು ನೃತ್ಯದ ಮೂಲಕ ಎಲ್ಲರ ಮನರಂಜಿಸಿದರು. ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.









