





ಕುಶಾಲನಗರ, ಏ.3 NEWS DESK : ಕುಶಾಲನಗರ ತಾಲ್ಲೂಕಿನ ತೊರೆನೂರು ಹಾಲು ಉತ್ಪಾದಕರ ಸಹಕಾರ ಸಂಘ ( ಹಾಲಿನ ಡೇರಿ ) ದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಟಿ.ಟಿ.ಪ್ರಕಾಶ್ ಹಾಗೂ ಉಪಾಧ್ಯಕ್ಷರಾಗಿ ಟಿ.ಡಿ.ಉದಯ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೊರೆನೂರು ಹಾಲಿನ ಡೇರಿಯ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಹಕಾರ ಇಲಾಖೆಯ ಬಿ.ಜಿ.ಸಂದೀಪ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಹಾಲಿನ ಡೇರಿಯ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಟಿ.ಎಲ್.ಪುಟ್ಟಸ್ವಾಮಿ, ಎ.ಎಂ.ಅಣ್ಣಯ್ಯ, ಟಿ.ಎನ್.ಗಿರೀಶ್, ಟಿ.ಎಂ.ಚಂದ್ರ, ಟಿ.ಟಿ.ಹನುಮಪ್ಪ, ನಾಗಮ್ಮ ಗಣೇಶ್, ಕುಮಾರಿ ಸೋಮಶೇಖರ್ ಆಯ್ಕೆಯಾಗಿದ್ದಾರೆ. ಡೇರಿಯ ನೂತನ ಅಧ್ಯಕ್ಷ ಟಿ.ಟಿ. ಪ್ರಕಾಶ್ ಮಾತನಾಡಿ, ಹಾಲಿನ ಡೇರಿಯ ಮೂಲಕ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಯೊಂದಿಗೆ ರೈತರ ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಡೇರಿಯ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಟಿ.ಎಲ್.ಮಹೇಶ್ ಕುಮಾರ್ ಅಭಿನಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಎಸ್.ಶಿವರಾಜ್ , ಸ್ಥಳೀಯರಾದ ಸಂತೋಷ್ , ಸೋಮಶೇಖರ್, ಗಣೇಶ್ ,ರವಿ, ಮಂಜುನಾಥ್ ವಿ, ಸುರೇಶ್, ಟಿ.ಎಂ. ಚಿದಂಬರ ,ವಿಕ್ರಂ ತಿಮ್ಮಶೆಟ್ಟಿ, ಮಾದೇಶ್ವರ ಇತರರು ಇದ್ದರು.