



ಮಡಿಕೇರಿ NEWS DESK ಏ.3 : ತಾಳತ್ತಮನೆಯಲ್ಲಿ ಏ.5 ರಂದು ಕಲ್ಲುರ್ಟಿ ದೈವ ಹಾಗೂ ಸ್ವಾಮಿ ಕೊರಗಜ್ಜ ದೈವದ ವರ್ಷಾವಧಿ ನೇಮೋತ್ಸವ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಗಣಹೋಮ, 11 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6.30 ಗಂಟೆಗೆ ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ಅವರ ಉಪಸ್ಥಿಯಲ್ಲಿ ಭಂಡಾರ ತೆಗೆಯುವುದು, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ, 9 ಗಂಟೆಗೆ ಕಲ್ಲುರ್ಟಿ ದೈವದ ನೇಮೋತ್ಸವ, ರಾತ್ರಿ 2 ಗಂಟೆಗೆ ಕೊರಗಜ್ಜ ಕೋಲಸೇವೆ ಹಾಗೂ ಪ್ರಸಾದ ವಿತರಣೆಯಾಗಲಿದೆ. ತಾಳತ್ತಮನೆಯ ದಿ.ರಾಧಾಕೃಷ್ಣ ರೈ ಹಾಗೂ ದಿ.ದೇವಕ್ಕಿ ರೈ ಅವರ ಮನೆಯಲ್ಲಿ ನಡೆಯುವ ನೇಮೋತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗುತ್ತಿಗೆದಾರ ಸದಾಶಿವ ರೈ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9480290688 ನ್ನು ಸಂಪರ್ಕಿಸಬಹುದಾಗಿದೆ.