





ಮಡಿಕೇರಿ NEWS DESK ಏ.7 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಏ.11 ರಂದು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚೊಕ್ಕಾಡಿ ಎನ್.ಅಪ್ಪಯ್ಯ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30 ಗಂಟೆಗೆ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಆಸಕ್ತರು ತಮ್ಮ ಭಾವಚಿತ್ರ ಮತ್ತು ಇತರ ಎಲ್ಲಾ ಮಾಹಿತಿಗಳೊಂದಿಗೆ ಖುದ್ದಾಗಿ ಹಾಜರಾಗುವಂತೆ ಮನವಿ ಮಾಡಿದರು. ವಧು-ವರರ ನೋಂದಣಿ ಪ್ರಕ್ರಿಯೆಯನ್ನು ಏ.11 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭಿಸಲಾಗುವುದು. ಅಲ್ಲದೆ ಆನ್ ಲೈನ್ ಮೂಲಕವೂ ವಧು-ವರರ ನೋಂದಣಿಯನ್ನು ಮಾಡಬಹುದಾಗಿದೆ. ಆಸಕ್ತರು appaiahchokkadiral@gmail.com, kumar.kuyyamudi@gmail.com ಇ-ಮೇಲ್‌ನಲ್ಲಿ ನೋಂದಾಯಿಸಬಹುದಾಗಿದೆ ಎಂದರು. ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ವಧು-ವರರ ಸಮಾವೇಶದಲ್ಲಿ ಭಾಗವಹಿಸುವವರಿಗೆ ನೋಂದಾಣಿ ಶುಲ್ಕ ರೂ.500 ನಿಗಧಿ ಪಡಿಸಲಾಗಿದೆ. ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ಆಗಿರಬೇಕು. ವಧುವರರು ಪೋಸ್ಟ್ ಕಾರ್ಡ್ ಅಳತೆಯ ತಮ್ಮ ಫೋಟೋ, ಜಾತಕ, ಆಧಾರ್ ಕಾರ್ಡ್, ವಿದ್ಯಾರ್ಹತೆ, ಉದ್ಯೋಗ ಮತ್ತಿತರ ಮಾಹಿತಿಗಳನ್ನು ನೀಡಬೇಕು ಎಂದು ಹೇಳಿದರು. ಕೋಶಾಧಿಕಾರಿ ಕುಯ್ಯಮುಡಿ ಅಶ್ವಿನ್ ಕುಮಾರ್ ಮಾತನಾಡಿ, ಕಾರ್ಯಕ್ರಮಕ್ಕೆ ವಿಶೇಷ ಚೇತನರು, ವಿಧುರ, ವಿಧವೆಯರು, ಮರು ವಿವಾಹ ಬಯಸುವವರು, ವಿಚ್ಛೇದಿತ ಪುರುಷ ಅಥವಾ ಮಹಿಳೆ ಭಾಗವಹಿಸಬಹುಗಿದೆ. ಹೆಚ್ಚಿನ ಮಾಹಿತಿಗೆ 9448884673, 9663254829 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸೆಟ್ಟೆಜನ ದೊರೆ ಗಣಪತಿ, ನಿರ್ದೇಶಕರಾದ ಕೆದಂಬಾಡಿ ಜಿ.ಮುಕುಂದ ಹಾಗೂ ಸಹ ಕಾರ್ಯದರ್ಶಿ ಕಟ್ರತನ ಲಲಿತಾ ಅಯ್ಯಣ್ಣ ಉಪಸ್ಥಿತರಿದ್ದರು.