Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಧರ್ಮಜ ಉತ್ತಪ್ಪರಿಗೆ ಸನ್ಮಾನ : 2028ರಲ್ಲೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ : ಕೆ.ಜಿ.ಪೀಟರ್ ವಿಶ್ವಾಸ*
  • *ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು*
  • *ವಿರಾಜಪೇಟೆ ಗೌರಿ-ಗಣೇಶ ವಿಸರ್ಜನಾ ಮಹೋತ್ಸವ: ಪೊಲೀಸ್, ಚೆಸ್ಕಾಂ ವಿರುದ್ಧ ಸಮಿತಿಗಳ ಆಕ್ರೋಶ*
  • *ವಿರಾಜಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಆರೋಗ್ಯದ ಪಾಠ*
  • *ಮೂರ್ನಾಡಿನಲ್ಲಿ ರೈತ ಕ್ಷೇತ್ರ ಪಾಠಶಾಲೆ : ಸಮಗ್ರ ಹೈನುಗಾರಿಕೆಯಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ : ಡಾ.ಶಿಲ್ಪ
  • *ವಿಶ್ವ ಪ್ರವಾಸೋದ್ಯಮ ದಿನಾಚರಣೆ : ಮೈಸೂರಿನಲ್ಲಿ ಅನಾವರಣಗೊಂಡ ಕೊಡವ ಸಂಸ್ಕೃತಿಯ ವೈಭವ*
  • *ಅ.4 ರಂದು 2ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ*
  • *2030ಕ್ಕೆ ಭಾರತದಲ್ಲಿ ಮಲೇರಿಯಾ ಮುಕ್ತ, ಕೊಡಗು ಜಿಲ್ಲೆಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಬಹುದು : ಮಹೇಶ್*
  • *ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ವಿಚಾರಣೆಗೆ ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ : ಜಿಲ್ಲಾಧಿಕಾರಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನಾಪೋಕ್ಲುವಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನಾಪೋಕ್ಲುವಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವ*

ಏಪ್ರಿಲ್ 7, 20251 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ನಾಪೋಕ್ಲು ಏ.7 NEWS DESK : ಕೊಡಗಿನ ಪ್ರಪ್ರಥಮ ಪೊನ್ನು ಮುತ್ತಪ್ಪ ದೇವಾಲಯ ಹಾಗೂ ಎರಡನೇ ಪರಶಿನಿ ಎಂದು ಪ್ರಖ್ಯಾತವಾಗಿರುವ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು. ಪೈಂಗುತ್ತಿ ಹಾಗೂ ಶ್ರೀ ಮುತ್ತಪ್ಪ ದೇವರ ಕಳಸ ನಡೆಯಿತು. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳ ಚಂಡೆಗಳೊಂದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆದು ನಂತರ ದೇವಾಲಯಕ್ಕೆ ಆಗಮನವಾಯಿತು. ಈ ಸಂದರ್ಭ ಸಿಡಿಮದ್ದು ಪ್ರದರ್ಶನ, ಕೇರಳದ ನೃತ್ಯ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ನಡೆದು ಜನಮನ ಆಕರ್ಷಿಸಿದವು. ರಾತ್ರಿ ಕುಟ್ಟಿಚಾತ ಮತ್ತು ಗುಳಿಗ ದೇವರ ವೆಳ್ಳಾಟಂ ನಡೆಯಿತು. ಉತ್ಸವದ ಅಂಗವಾಗಿ ಕೇರಳ ನೀಲೇಶ್ವರದ ಮುರಳಿ ಕೃಷ್ಣ ತಂತ್ರಿ ಅವರಿಂದ ಗಣಪತಿ ಹೋಮ ಮತ್ತು ಶುದ್ಧ ಕಳಸ ನಡೆಯಿತು. ರಾತ್ರಿ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಿತು. ಗುಳಿಗ ಕೋಲ ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪನ್ ಮತ್ತು ಮುತ್ತಪ್ಪ ತೆರೆ ಜರುಗಿದವು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ ಚಂದ್ರನ್, ಉಪಾಧ್ಯಕ್ಷರಾದ ಎಂ.ಕೆ.ತಂಗ, ಚಿನ್ನ, ಕಾರ್ಯದರ್ಶಿ ರಾಜೀವನ್ ,ಉಪ ಕಾರ್ಯದರ್ಶಿ ಮನೋಹರ್, ಖಜಾಂಚಿ ಕಿಶೋರ್ ಪಿ.ಸಿ, ದೇವಾಲಯದ ಪೂಜಾರಿ ಹರಿದಾಸ್ ಮತ್ತು ಆಡಳಿತ ಮಂಡಳಿ ಸದಸ್ಯರು ಊರ ಹಾಗೂ ಪರ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ದುಗ್ಗಳ ಸದಾನಂದ.

Follow us Follow us
Share. WhatsApp Facebook Twitter Email Telegram Copy Link

Related Posts

*ಧರ್ಮಜ ಉತ್ತಪ್ಪರಿಗೆ ಸನ್ಮಾನ : 2028ರಲ್ಲೂ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ : ಕೆ.ಜಿ.ಪೀಟರ್ ವಿಶ್ವಾಸ*

ಸೆಪ್ಟೆಂಬರ್ 29, 2026

*ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು*

ಸೆಪ್ಟೆಂಬರ್ 29, 2026

*ವಿರಾಜಪೇಟೆ ಗೌರಿ-ಗಣೇಶ ವಿಸರ್ಜನಾ ಮಹೋತ್ಸವ: ಪೊಲೀಸ್, ಚೆಸ್ಕಾಂ ವಿರುದ್ಧ ಸಮಿತಿಗಳ ಆಕ್ರೋಶ*

ಸೆಪ್ಟೆಂಬರ್ 29, 2026

*ದುಬಾರೆ ಆನೆ ಶಿಬಿರದಲ್ಲಿ ಗಂಡಾನೆ ಸಾವು*

ಸೆಪ್ಟೆಂಬರ್ 29, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಸೆ.29 : ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಸತತ ಐದು…

*ವಿರಾಜಪೇಟೆ ಗೌರಿ-ಗಣೇಶ ವಿಸರ್ಜನಾ ಮಹೋತ್ಸವ: ಪೊಲೀಸ್, ಚೆಸ್ಕಾಂ ವಿರುದ್ಧ ಸಮಿತಿಗಳ ಆಕ್ರೋಶ*

ಸೆಪ್ಟೆಂಬರ್ 29, 2026

*ವಿರಾಜಪೇಟೆಯಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಆರೋಗ್ಯದ ಪಾಠ*

ಸೆಪ್ಟೆಂಬರ್ 29, 2026

*ಮೂರ್ನಾಡಿನಲ್ಲಿ ರೈತ ಕ್ಷೇತ್ರ ಪಾಠಶಾಲೆ : ಸಮಗ್ರ ಹೈನುಗಾರಿಕೆಯಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ : ಡಾ.ಶಿಲ್ಪ

ಸೆಪ್ಟೆಂಬರ್ 29, 2026

*ವಿಶ್ವ ಪ್ರವಾಸೋದ್ಯಮ ದಿನಾಚರಣೆ : ಮೈಸೂರಿನಲ್ಲಿ ಅನಾವರಣಗೊಂಡ ಕೊಡವ ಸಂಸ್ಕೃತಿಯ ವೈಭವ*

ಸೆಪ್ಟೆಂಬರ್ 28, 2026

*ಅ.4 ರಂದು 2ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ*

ಸೆಪ್ಟೆಂಬರ್ 28, 2026

*2030ಕ್ಕೆ ಭಾರತದಲ್ಲಿ ಮಲೇರಿಯಾ ಮುಕ್ತ, ಕೊಡಗು ಜಿಲ್ಲೆಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 28, 2026

*ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಬಹುದು : ಮಹೇಶ್*

ಸೆಪ್ಟೆಂಬರ್ 28, 2026

*ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ವಿಚಾರಣೆಗೆ ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ : ಜಿಲ್ಲಾಧಿಕಾರಿ*

ಸೆಪ್ಟೆಂಬರ್ 28, 2026

*ಸಮಾಜಮುಖಿ ಸೇವೆ ಪರಿಗಣಿಸಿ ಕೇಳೇಟಿರ ದೀಪು ದೇವಯ್ಯ ಸನ್ಮಾನ*

ಸೆಪ್ಟೆಂಬರ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.