






ಶನಿವಾರಸಂತೆ ಏ.7 NEWS DESK : ದೊಡ್ಡಕೊಡ್ಲಿ ಗ್ರಾಮದಲ್ಲಿ ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಮತ್ತು ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೊಡ್ಡಕೊಡ್ಲಿ ಪ್ರಬುದ್ದ ಯುವಕ ಸಂಘದ ಕಾರ್ಯದರ್ಶಿ ಡಿ.ಎನ್.ವಸಂತ್ ತಿಳಿಸಿದ್ದಾರೆ. ಶನಿವಾರಸಂತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂಬೇಡ್ಕರ್ ಅವರ ಚಿಂತನೆ ಆದರ್ಶಗಳನ್ನು ಯುವ ಸಮೂದಾಯಕ್ಕೆ ಸಾರುವ ಸಲುವಾಗಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪುತ್ಥಳಿಯನ್ನು ನಿರ್ಮಿಸುತ್ತಾರೆ. ಇದೇ ರೀತಿಯಲ್ಲಿ ದೊಡ್ಡಕೊಡ್ಲಿ ಗ್ರಾಮದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಸಮಿತಿ ವತಿಯಿಂದ ಅವರ ಪುತ್ಥಳಿಯನ್ನು ನಿರ್ಮಿಸಲಾಗಿದ್ದು, ಇದರ ವತಿಯಿಂದ ಏ.14 ರಂದು ದೊಡ್ಡಕೊಡ್ಲಿ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರನೆ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಂದು ಬೆಳಗ್ಗೆ 9.30ಕ್ಕೆ ದೊಡ್ಡಕುಂದ ಬಸ್ ನಿಲ್ದಾಣದಿಂದ ಮೆರವಣಿಗೆ ಪ್ರಾರಂಭಗೊಂಡು ಕೊಡ್ಲಿಪೇಟೆಯ ಪ್ರಮುಖ ಬೀದಿಗಳಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರದ ಟ್ಯಾಬ್ಲೋ ಮತ್ತು ನಗಾರಿಬಡಿತ, ಡೊಳ್ಳು ಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ಮೆರವಣಿಗೆ ಸಾಗುತ್ತದೆ ಮಧ್ಯಾಹ್ನ 12ಕ್ಕೆ ದೊಡ್ಡಕೊಡ್ಲಿ ವೃತ್ತದಲ್ಲಿ ದಿನಾಚರಣೆ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯುತ್ತದೆ ಎಂದರು. ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ, ರಾಮನಗರ ಜಿಲ್ಲೆ ಚನ್ನಪಟ್ಟಣದ ಅಂಬೇಡ್ಕರ್ ವಿಚಾರವಾದಿ ಜಯರಾಮ್ ಮುಖ್ಯ ಭಾಷಣ ಮಾಡಲಿದ್ದು ಕಾರ್ಯಕ್ರಮದಲ್ಲಿ ಟಿ.ನರಸೀಪುರ ಬೌದ್ದ ವಿಹಾರದ ಬಂತೆ ಸುಫತಾಪಲ ದಿವ್ಯ ಸಾನಿಧ್ಯವಹಿಸಲಿರುವ ಕಾರ್ಯಕ್ರಮದಲ್ಲಿ ಮಡಿಕೇರಿ ಮೆಡಿಕಲ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಸೌಮ್ಯ ಪ್ರಕಾಶ್ ಮುಂತಾದವರು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಗ್ರಾ.ಪಂ.ಸದಸ್ಯ ಡಿ.ಕೆ.ಪ್ರಸನ್ನ ಅಧ್ಯಕ್ಷತೆವಹಿಸುತ್ತಾರೆ ಈ ನಿಟ್ಟಿನಲ್ಲಿ ಎಲ್ಲಾರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು. ಗೋಷ್ಠಿಯಲ್ಲಿ ಪ್ರಬುದ್ದ ಯುವ ಸಂಘದ ಅಧ್ಯಕ್ಷ ಡಿ.ವಿ.ಜಗದೀಶ್, ಪ್ರಮುಖರಾದ ಡಿ.ಎಚ್.ಮಂಜುನಾಥ್, ಡಿ.ಡಿ.ಕಾರ್ತಿಕ್ ಹಾಜರಿದ್ದರು.