






*ಮೈದಾನ 1*
ಬೊಟ್ಟಂಗಡ ಮತ್ತು ಕರ್ತಮಾಡ ತಂಡಗಳ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್ನಲ್ಲಿ 5-3 ಗೋಲುಗಳ ಅಂತರದಲ್ಲಿ ಕರ್ತಮಾಡ ತಂಡ ಜಯ ಸಾಧಿಸಿತು. ಕರ್ತಮಾಡ ತಂಡದ ಪರ ಮೋಹನ್ 1 ಟೈಬ್ರೇಕರ್ ನಲ್ಲಿ ರತನ್ 2, ಕಿರಣ್, ಮೋಹನ್ ಹಾಗೂ ರಾಯ್ ತಲಾ 1 ಗೋಲು ದಾಖಲಿಸಿದರು. ಬೊಟ್ಟಂಗಡ ತಂಡದ ಪರ ಕೌಶಿಕ್ 1, ಟೈ ಬ್ರೇಕರ್ನಲ್ಲಿ ಕೌಶಿಕ್, ನಿಖಿಲ್ ಹಾಗೂ ಪೆಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಬೊಟ್ಟಂಗಡ ಪೆಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಚಿಂಡಮಾಡ ಮತ್ತು ತೇಲಪಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲು ದಾಖಲಿಸುವ ಮೂಲಕ ಪಂದ್ಯ ಡ್ರಾ ಆದ ಹಿನ್ನೆಲೆ ಟೈ ಬ್ರೇಕರ್ನಲ್ಲಿ ಚಿಂಡಮಾಡ ತಂಡ 3-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ತೇಲಪಂಡ ಗುಲ್ಶನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕುಂಡ್ರಂಡ ಮತ್ತು ಆಟ್ರಂಗಡ ನಡುವಿನ ಪಂದ್ಯದಲ್ಲಿ ಆಟ್ರಂಗಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿದರು. ಆಟ್ರಂಗಡ ಪರ ನಿತಿನ್ ಕುಟ್ಟಪ್ಪ 1 ಗೋಲು ಬಾರಿಸಿದರು. ಕುಂಡ್ರಂಡ ಅಜಿತ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಾಡ್ಯಮಾಡ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡ 2-0 ಗೋಲು ಅಂತರದಲ್ಲಿ ಗೆಲುವು ದಾಖಲಿಸಿತು. ಮಳವಂಡ ಪರ ಕಲನ್ ಚಿಟ್ಟಿಯಪ್ಪ ಹಾಗೂ ಅದಿತ್ ಮುತ್ತಣ್ಣ ತಲಾ 1 ಗೋಲು ಬಾರಿಸಿದರು. ಕಾಡ್ಯಮಾಡ ಚಿಣ್ಣಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅರೆಯಡ ಮತ್ತು ಚೋಕಿರ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ನಲ್ಲಿ 3-2 ಗೋಲುಗಳ ಅಂತರದಲ್ಲಿ ಅರೆಯಡ ತಂಡ ಗೆಲುವು ದಾಖಲಿಸಿತು. ಚೋಕಿರ ತ್ರಿಶೂಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಚೇಂದಿರ ಮತ್ತು ಕಾಯಪಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಸಮಬಲವಾದ ಕಾರಣ ನಂತರ ನಡೆದ ಟೈ ಬ್ರೇಕರ್ನಲ್ಲಿ 7-6 ಗೋಲುಗಳ ಅಂತರದಲ್ಲಿ ಕಾಯಪಂಡ ತಂಡ ಗೆಲುವು ದಾಖಲಿಸಿತು. ಚೇಂದಿರ ಮಂಜು ಉತ್ತಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 2*
ಕೋಳೇರ ಮತ್ತು ಕರವಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೋಳೇರ ತಂಡ ಗೆಲುವು ದಾಖಲಿಸಿತು. ಕೋಳೇರ ಪರ ಮಿಲನ್ ಮಾಚಯ್ಯ 1 ಗೋಲು ಬಾರಿಸಿದರು. ಕರವಟ್ಟಿರ ದೀಪ್ತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಪ್ಪಚೆಟ್ಟೋಳಂಡ ಮತ್ತು ಪಳೆಯಂಡ(ನಾಲ್ಕೇರಿ) ತಂಡಗಳ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಅಪ್ಪಚೆಟ್ಟೋಳಂಡ ತಂಡ ಗೆಲುವು ದಾಖಲಿಸಿತು. ಅಪ್ಪಚೆಟ್ಟೋಳಂಡ ತಂಡದ ಆಕಾಶ್ ಅಪ್ಪಯ್ಯ ಹಾಗೂ ದೀಪಕ್ ತಲ 1 ಗೋಲು ದಾಖಲಿಸಿದರು. ಪಳೆಯಂಡ ಪರ ಸೂರಿ ಸುಬ್ಬಯ್ಯ 1 ಗೋಲು ಬಾರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮನೆಯಪಂಡ ಮತ್ತು ಅಕ್ಕಪಂಡ ನಡುವಿನ ಪಂದ್ಯದಲ್ಲಿ ಮನೆಯಪಂಡ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮನೆಯಪಂಡ ಪರ ಆದಿತ್ಯ ಅಯ್ಯಣ್ಣ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಅರವಿನ್ ಮಾಚಯ್ಯ 1 ಗೋಲು ಬಾರಿಸಿದರು. ಅಕ್ಕಪಂಡ ಸೌರಬ್ ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುದ್ದಿಯಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ನಿಗದಿತ ಅವಧಿಯಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ ನಲ್ಲಿ 3-1 ಗೋಲುಗಳ ಅಂತರದಲ್ಲಿ ಆಲೆಮಾಡ ತಂಡ ಜಯ ಸಾಧಿಸಿತು. ಮುದ್ದಿಯಡ ದಿಶಾನ್ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಾನಿಪಂಡ ಮತ್ತು ಚಕ್ಕೇರ ನಡುವಿನ ಪಂದ್ಯದಲ್ಲಿ 2-0 ಗೋಲು ಅಂತರದಲ್ಲಿ ಚೆಕ್ಕೇರ ತಂಡ ಜಯ ಸಾಧಿಸಿತು. ಚೆಕ್ಕೇರ ಪರ ಸಜನ್ ಸೋಮಯ್ಯ ಹಾಗೂ ಸಿದ್ದಾಂತ್ ಉತ್ತಪ್ಪ ತಲಾ 1 ಗೋಲು ದಾಖಲಿಸಿದರು. ಮಾನಿಪಂಡ ಚೇತನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೊಳ್ತಂಡ ಮತ್ತು ಬೊಜ್ಜಂಗಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಬೊಜ್ಜಂಗಡ ತಂಡ ಜಯ ಸಾಧಿಸಿತು. ಬೊಜ್ಜಂಗಡ ತಂಡದ ಪರ ಚಿಣ್ಣಪ್ಪ ಹಾಗೂ ಬೆನೆಟ್ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಬೊಳ್ತಂಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 3*
ಮಚ್ಚಾರಂಡ ಮತ್ತು ಎಳ್ತಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ಮಚ್ಚಾರಂಡ ತಂಡ ಗೆಲುವು ಸಾಧಿಸಿತು. ಮಚ್ಚಾರಂಡ ಪರ ಗಗನ್ ಕರುಂಬಯ್ಯ, ಕಿನು ಅಯ್ಯಪ್ಪ, ತಮ್ಮಯ್ಯ ಹಾಗೂ ಅಪ್ಪಣ್ಣ ತಲಾ 1 ಗೋಲು ದಾಖಲಿಸಿದರು. ಎಳ್ತಂಡ ಪರ ರಕ್ಷಿತ್, ರೋಶನ್ ಹಾಗೂ ವಿನು ಗಣಪತಿ ತಲಾ 1 ಗೋಲು ಬಾರಿಸಿದರು. ಎಳ್ತಂಡ ವಿನು ಗಣಪತಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಕೊಂಗಂಡ ಮತ್ತು ಕೋದಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕೊಂಗಂಡ ಜಯ ಸಾಧಿಸಿತು. ಕೊಂಗಂಡ ಪರ ಸನತ್ ಸೋಮಣ್ಣ ಹಾಗೂ ನಿಖಿತ್ ಪೊನ್ನಣ್ಣ ತಲಾ 1 ಗೋಲು ದಾಖಲಿಸಿದರು. ಕೋದಂಡ ಆದಿತ್ಯ ಗಣಪತಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಳ್ಳೇಂಗಡ(ಬೆಳ್ಳೂರು) ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಜಯ ಸಾಧಿಸಿತು. ಕಂಬೀರಂಡ ಪರ ಯೋಗೇಶ್ ಅಪ್ಪಯ್ಯ 2 ಹಾಗೂ ಮಿಥುನ್ ಮೊಣ್ಣಪ್ಪ 1 ಗೋಲು ದಾಖಲಿಸಿದರು. ಕಳ್ಳೇಂಗಡ ತನುಷ್ ಚಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬಾಳೆಯಡ ಮತ್ತು ಮೂಕಳೇರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ದಾಖಲಿಸಿ ಸಮಬಲ ಪ್ರದರ್ಶನ ಮಾಡಿದ ಕಾರಣ ಟೈ ಬ್ರೇಕರ್ನಲ್ಲಿ 4-3 ಗೋಲುಗಳ ಅಂತರದಲ್ಲಿ ಬಾಳೆಯಡ ತಂಡ ಗೆಲುವು ಸಾಧಿಸಿತು. ಮೂಕಳೇರ ಪೆಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಾಲೆಯಡ ಮತ್ತು ಕೊಣೇರಿರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೊಣೇರಿರ ತಂಡ ಗೆಲುವು ಸಾಧಿಸಿತು. ಕೊಣೇರಿರ ಪರ ವಿಪಿನ್ ಚಂಗಪ್ಪ 1 ಗೋಲು ಬಾರಿಸಿದರು. ಪಾಲೆಯಡ ಮೊಣ್ಣಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಇಟ್ಟೀರ ಮತ್ತು ಅಲ್ಲಂಡ ನಡುವಿನ ಪಂದ್ಯದಲ್ಲಿ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಇಟ್ಟೀರ ತಂಡ ಜಯ ಸಾಧಿಸಿತು. ಇಟ್ಟೀರ ತಂಡದ ಪರ ಕೆವಿನ್ ಕುಟ್ಟಪ್ಪ ಹ್ಯಾಟ್ರಿಕ್ ಗೋಲು ಬಾರಿಸಿದರೆ, ರೋಹನ್ 1 ಗೋಲು ಬಾರಿಸಿದರು. ಅಲ್ಲಂಡ ಮುತ್ತಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.