

ಸುಂಟಿಕೊಪ್ಪ ಏ.12 NEWS DESK : ಮಾದಾಪುರ ಎಸ್‍ಜೆಎಂ ಶಾಲೆಯ ವತಿಯಿಂದ 40 ದಿನಗಳ ಬೇಸಿಗೆ ಶಿಬಿರಕ್ಕೆ ಬೆಟ್ಟದಪುರದ ಮುರುಗಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಚಾಲನೆ ನೀಡಿದರು. ಬೆಟ್ಟದಪುರದ ಮುರುಗಮಠದ ಶ್ರೀ ಮೋಕ್ಷಪತಿ ಸ್ವಾಮೀಜಿಯವರು 40 ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಶಿಬಿರದಿಂದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೆಚ್ಚಿಸಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಇದರಿಂದ ಸಾಕಷ್ಟು ಶಿಕ್ಷಣ ಸೇರಿದಂತೆ ಸಾಮಾಜಿಕ ಉತ್ತಮ ವಿಚಾರ ದಾರೆಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುವಂತಾಗಬೇಕೆಂದರು. ಕ್ರಿಕೆಟ್ ಹಾಗೂ ಕಬ್ಬಡಿ ನುರಿತ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವ ಮೂಲಕ ಪೋಷಕರಿಗೂ, ಶಾಲೆ ಹಾಗೂ ಊರಿಗೆ ಕೀರ್ತಿಯನ್ನು ತರಲು ಈ ಶಿಬಿರವು ಸಹಕಾರಿಯಾಗಲೆಂದು ಮೋಕ್ಷಪತಿ ಸ್ವಾಮೀಜಿ ಹೇಳಿದರು. ಈ ಸಂದರ್ಭ ಶಾಲಾ ಶಿಕ್ಷಕಿಯರಾದ ಪ್ರಿಯಾ, ಪ್ರಜ್ಞಾ, ನಿವೇದಿತಾ, ಜೂರ, ಲವ್ಯ, ಅಂಕಿತ, ಧನ್ಯ, ಆದಿರಾ, ಸಂಸ್ಥೆಯ ವಿಚಾರಕ ಅನಿಶ್ ಹಾಗೂ ಶಿಬಿರಾರ್ಥಿಗಳು ಇದ್ದರು. ಬೇಸಿಗೆ ಶಿಬಿರದಲ್ಲಿ ಕ್ರಿಕೆಟ್, ಕಬ್ಬಡಿ, ಶಾಸ್ತ್ರೀಯ ನೃತ್ಯ ಮತ್ತು ಇನ್ನಿತರ ಮನೋರಂಜನಾ ಆಟೋ ತರಬೇತಿಯನ್ನು ನೀಡಲಾಗುವುದು.