ಸಿದ್ದಾಪುರ ಏ.28 NEWS DESK : ಇಂಜಿಲಗೆರೆ ಗ್ರಾಮದ ಪೊಮಾಡಪುರ ಶ್ರೀ ಮುತ್ತಪ್ಪ ದೇವಾಲಯದ 70ನೇ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮಹೋತ್ಸವಕ್ಕೆ ಅಮ್ಮತ್ತಿ, ಓಂಟಿಯಂಗಡಿ, ಪಾಲಿಬೆಟ್ಟ, ಗುಹ್ಯ, ಸಿದ್ದಾಪುರ, ನೆಲ್ಯಹುದಿಕೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. 2 ದಿನಗಳ ಕಾಲ ನಡೆದ ತೆರೆ ಮಹೋತ್ಸವದಲ್ಲಿ ವಿವಿಧ ದೇವರುಗಳ ಕೋಲಗಳ ತೆರೆಗಳನ್ನು ಭಕ್ತರು ಕಣ್ತುಂಬಿಕೊಂಡರು ಚೆಂಡೆಗಳೊಂದಿಗೆ ವಸೂರಿಮಾಲಾ ತೆರೆ ಗುಳಿಗನ ತೆರೆ ಕುಟ್ಟಿಚಾತನ್ ತೆರೆ ಮತ್ತು ಮುತ್ತಪ್ಪನ ತಿರುವಪ್ಪನ ತೆರೆ ಭಕ್ತರನ್ನು ಹೆಚ್ಚು ಆಕರ್ಷಿಸಿತು ಉಳಿದಂತ ಮುತ್ತಪ್ಪ ತಿರುವಪ್ಪನ ವೆಳ್ಳಾಟಂ ನಡೆದವು. ಮಹೋತ್ಸವದ ಭಾಗವಾಗಿ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ತೆರೆ ಮಹೋತ್ಸವದ ಅಂಗವಾಗಿ ಪೊಮಾಡಪುರ ಮುತ್ತಪ್ಪ ದೇವಾಲಯ ಹಾಗೂ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗೆ ವಿವಿಧ ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ ಪಡೆದುಕೊಂಡರು.ಈ ಸಂದರ್ಭ ಪೊಮಾಡಪುರ ಶ್ರೀ ಮುತ್ತಪ್ಪ ದೇವಾಲಯದ ಸಮಿತಿ ಅಧ್ಯಕ್ಷ ಟಿ.ಎ.ಪ್ರಕಾಶ್ ಕಾರ್ಯದರ್ಶಿ ಬಿ.ಎಸ್.ಮೋಹನ್ ಕುಮಾರ್, ಖಜಾಂಚಿ ಎ.ಬಿ.ಕಾಳಪ್ಪ ಸರ್ವ ಪದಾಧಿಕಾರಿಗಳು ಹಾಜರಿದ್ದರು
ವರದಿ : ಸುರೇಶ್ ಗುಹ್ಯ











