
ಸುಂಟಿಕೊಪ್ಪ ಮೇ 17 NEWS DESK : ಸುಂಟಿಕೊಪ್ಪದಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ 26ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಡಿ.ಶಿವಪ್ಪ ಅವರ ಮೊಮ್ಮಗ ವಿಶಾಲ್ ಶಿವಪ್ಪ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಧ್ವಜಾರೋಹಣ ನೇರವೇರಿಸಿ ಚೆಂಡನ್ನು ಒದೆಯುವ ಮೂಲಕ ಚಾಲನೆ ನೀಡಿದರು. ಸುಂಟಿಕೊಪ್ಪ ಜಿ.ಯಂ.ಪಿ.ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ 39ನೇ ವರ್ಷ ಹಾಗೂ ಡಿ. ಶಿವಪ್ಪ ಸ್ಮಾರಕ 26ನೇ ವರ್ಷದ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಮೊದಲ ದಿನದ ಪಂದ್ಯ ಅತಿಥೇಯ ಬ್ಲೂ ಬಾಯ್ಸ್ ಯೂತ್ ಕ್ಲಬ್ ಮತ್ತು ಪನ್ಯ ಎಫ್.ಸಿ. ಪನ್ಯ ತಂಡದ ನಡುವೆ ಮೊದಲ ಪಂದ್ಯ ನಡೆಯಿತು, ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಪ್ರಸಾದ್ ಕುಟ್ಟಪ್ಪ, ಶಬ್ಬಿರ್, ರಫೀಕ್ ಖಾನ್, ವಸಂತಿ, ಮಾಜಿ ಅಧ್ಯಕ್ಷ ಕೆ.ಇ.ಕರೀಂ ಹಾಗೂ ಬ್ಲೂಬಾಯ್ಸ್ ಯೂತ್ ಕ್ಲಬ್ ಆಲಿಕುಟ್ಟಿ, ಗೌರವಧ್ಯಕ್ಷ ಟಿ.ವಿ.ಪ್ರಸನ್ನ, ಬಿ.ಕೆ.ಪ್ರಶಾಂತ್, ಕುಶಾಲನಗರ ಉದ್ಯಮಿ ಬ್ಲೆಸ್ಜಿಕ್ರಾಸ್ತ, ಎಂ.ಎ.ಉಸ್ಮಾನ್ ಸೇರಿದಂತೆ ಮತ್ತಿತರರು ಇದ್ದರು. ಮೊದಲ ಪಂದ್ಯವು ಸುಂಟಿಕೊಪ್ಪ ಬ್ಲೂ ಬಾಯ್ಸ್ ಮತ್ತು ಪನ್ಯ ಎಫ್.ಸಿ ಪನ್ಯ ತಂಡದ ನಡುವೆ ನಡೆದು ಪಂದ್ಯದ ಮೊದಲಾರ್ಧದ 12 ಮತ್ತು 18ನೇ ನಿಮೀಷದಲ್ಲಿ ಬ್ಲೂಬಾಯ್ಸ್ ತಂಡದ ಮುನ್ನಡೆ ಆಟಗಾರ ಚಂದ್ರ ಅವರು ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ದ್ವಿತೀಯಾರ್ಧದಲ್ಲಿ ಚೇತರಿಕೆಯ ಆಟವಾಡಿದ ಪನ್ಯ ಎಫ್.ಸಿ. ತಂಡದವರು 2 ಗೋಲುಗಳಿಸುವ ಮೂಲಕ ಸಮಾನಂತರಗೊಳಿಸಿದರು. ಟೈಬ್ರೇಕರ್‍ನಲ್ಲಿ ಪನ್ಯ ಎಫ್.ಸಿ ತಂಡವನ್ನು 5-3 ಗೋಲುಗಳಿಂದ ಸೋಲಿಸಿ ಅತಿಥೇಯ ಬ್ಲೂ ಬಾಯ್ಸ್ ತಂಡ ಮುನ್ನಡೆ ಪಡೆದುಕೊಂಡರು. ದ್ವಿತೀಯ ಪಂದ್ಯಾವಳಿಯು ಅಮಿಟಿ ಎಫ್.ಸಿ ಗದ್ದೆಹಳ್ಳ ಮತ್ತು ಬೆಟ್ಟಗೇರಿ ಎಫ್.ಸಿ ತಂಡಗಳ ನಡುವೆ ನೆಡೆದು ಎರಡು ತಂಡಗಳು ಸಮಬಲದ ಪ್ರದರ್ಶನವನ್ನು ನೀಡಿದ್ದು ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡದ ಕುಟ್ಟಿ ಉತ್ತಮವಾದ ಶೂಟ್ ಗೋಲುಬಾರಿಸಿದರು. ಎದುರಾಳಿ ತಂಡದ ಅದೃಷ್ಟಕ್ಕೆ ಗೋಲಾಗಿ ಪರಿವರ್ತನೆಗೊಳ್ಳದೆ ಕಂಬಕ್ಕೆ ತಗುಲಿ ವಾಪಾಸ್ಸು ಕುಟ್ಟಿ ನೇರೆದಿದ್ದ ಕ್ರೀಡಾಭಿಮಾನಿಗಳಿಗೆ ಬಾರಿ ನಿರಾಸೆಗೊಳಿಸಿತು. ಯಾವುದೇ ಗೋಲುಗಳಿಸಿದ್ದ ಹಿನ್ನಲೆಯಲ್ಲಿ ಟೈಬ್ರೇಕರ್‍ನಲ್ಲಿ 4-5 ಗೋಲುಗಳಿಂದ ಅಮಿಟಿ ಎಫ್.ಸಿ ಗದ್ದೆಹಳ್ಳ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ಇಂದಿನ (17.5.25) ಪಂದ್ಯಾವಳಿಗಳು :: ಮೊದಲ ಪಂದ್ಯ ಮಧ್ಯಾಹ್ನ 3 ಗಂ ಗಂಟೆಗೆ ಫ್ರೆಂಡ್ಸ್ ಎಫ್.ಸಿ ಬೀಟ್ಟಿಕಟ್ಟೆ v/s ಮಿಡ್‍ಸಿಟಿ ಸುಂಟಿಕೊಪ್ಪ, ದ್ವಿತೀಯ ಪಂದ್ಯಾವಳಿ ಸಂಜೆ 4. ಗಂಟೆಗೆ ಆಲ್‍ಸ್ಟಾರ್ ಎಫ್.ಸಿ ಗೋಣಿಕೊಪ್ಪ v/s ನೇತಾಜಿ ಯುವಕ ಸಂಘ ಕೊಡಗರಹಳ್ಳಿ









