
ಸುಂಟಿಕೊಪ್ಪ ಮೇ 19 NEWS DESK : 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಬೀಳ್ಕೊಡಲಾಯಿತು. ಕಳೆದ 11 ವರ್ಷಗಳ ಕಾಲ 7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾಗಿ ಸೇವೆಸಲ್ಲಿಸಿದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಳಂಜ ಗ್ರಾಮದ ಸೆಂಟ್ ಸೆಬಾಸ್ಟಿನ್ ವರ್ಗಾವಣೆಗೊಂಡಿದ್ದು, ಅವರಿಗೆ ಸುಂಟಿಕೊಪ್ಪದ ಇಮ್ಯಾನ್ಯುವೆಲ್ ಸಿಎಸ್‍ಐ ದೇವಾಲಯದ ಧರ್ಮ ಗುರುಗಳಾದ ಮಧು ಕಿರಣ್ ಮತ್ತು ಉದ್ಯಮಿಗಳಾದ ವಿಲಿಯಂ ಕುಟುಂಬ ವರ್ಗದವರು ಸನ್ಮಾನಿಸಿ ಗೌರವಿಸಿ ಬೋಳ್ಕೊಟ್ಟರು. ಈ ಸಂದರ್ಭ 7ನೇ ಹೊಸಕೋಟೆ ಎಸ್.ಹೆಚ್.ಕನ್ಯಾಸ್ತ್ರೀ ಮಠದ ಮದರ್ ಸೂಪಿರಿಯರ್ ಟೆಸ್ಸಿ ಮ್ಯಾನುವೆಲ್, ಸಿಸ್ಟರ್‍ಗಳಾದ ಲೀಸಾ ಟೋಮ್, ಅ್ಯನ್ಸಿ, ಜಿನ್ಸಿ ಇವರುಗಳು ಇದ್ದರು.










