
ಮಡಿಕೇರಿ ಮೇ 19 NEWS DESK : ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಡಿಕೇರಿ ಗಾಳಿಬೀಡಿನಲ್ಲಿರುವ ವಸತಿ ಶಾಲೆ, ಜವಾಹರ್ ನವೋದಯ ವಿದ್ಯಾಲಯದಲ್ಲಿ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ಸಂದರ್ಶಕ್ಕೆ ಕರೆಯಲಾಗಿದೆ. ಮೇ 27 ರಂದು ಬೆಳಗ್ಗೆ 10 ಗಂಟೆಗೆ ಗಾಳಿಬೀಡು ನವೋದಯ ವಿದ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ. ಇದು ಕಾಂಟ್ರ್ಯಾಕ್ಟ್ ಹುದ್ದೆಯಾಗಿದ್ದು 10 ತಿಂಗಳವರೆಗೆ ಕಾರ್ಯ ನಿರ್ವಹಿಸಬಹುದಾಗಿದೆ. ವಯೋಮಿತಿ 35 ರಿಂದ 55 ವರ್ಷದೊಳಗಿನ ಹೆಣ್ಣು ಮಕ್ಕಳು, ಕನಿಷ್ಠ ಹತ್ತನೇ ತರಗತಿಯನ್ನು ಪಾಸಾಗಿರಬೇಕು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡಲಾಗುವುದು. ವಿವಾಹ, ವಿವಾಹೇತರ, ಮದುವೆಯಾದ ಅಥವಾ ಮದುವೆಯಾಗದ ಅಥವಾ ವಿಧವೆಯರೂ ಸಂದರ್ಶನದಲ್ಲಿ ಭಾಗವಹಿಸಬಹುದು. ಕೌಶಲ್ಯ ರಹಿತ ಕಾರ್ಮಿಕರಿಗೆ ಸರಕಾರದಿಂದ ಕೊಡಮಾಡುವ ವೇತನವನ್ನು ನೀಡಲಾಗುವುದು, ಇತರ ಸೌಲಭ್ಯಗಳು ಊಟ, ವಸತಿ ಮತ್ತು ವಿದ್ಯಾಲಯದಲ್ಲಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಉಚಿತವಾಗಿರುತ್ತವೆ ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.









