
ಸುಂಟಿಕೊಪ್ಪ ಮೇ 20 NEWS DESK : ಕೊಡಗು ಹಿಂದೂ ಮಲಯಾಳಿ ಕ್ರಿಕೆಟ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಯಂಗ್ ಚಾಲೆಂಜರ್ ಐಗೂರು ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಮಾದಾಪುರ ಹಿಂದೂ ಮಾಲಯಾಳಿ ಕುಟುಂಬದ ವತಿಯಿಂದ ಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೊಡಗು ಹಿಂದೂ ಮಲಯಾಳಿ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಐಗೂರು ಯಂಗ್ ಚಾಲೆಂಜರ್ಸ್ ಹಾಗೂ ಇಲೆವನ್ ಸ್ಟಾರ್ ಕಂಬಿಬಾಣೆ ತಂಡಗಳ ರೋಚಕ ಪಂದ್ಯಾವಳಿಯು ನಡೆದು ಮೊದಲು ಬ್ಯಾಟ್ ಕಂಬಿಬಾಣೆ ತಂಡ 6 ಓವರ್‍ಗಳ ಸಿಮೀತ ಪಂದ್ಯಾವಳಿಯಲ್ಲಿ 48 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು. ನಂತರ ಬ್ಯಾಂಟಿಗ್‍ಗೆ ಇಳಿದ ಯಂಗ್ ಚಾಲೆಂಜರ್ಸ್ ತಂಡವು 5 ವಿಕೆಟ್‍ಗಳನ್ನು ಕಳೆದುಕೊಂಡು ಇನ್ನು 3 ಎಸೆತ ಬಾಕಿ ಇರುವಂತೆ 49 ರನ್‍ಗಳಿಸಿ ಗೆಲುವು ಸಾಧಿಸುವ ಮೂಲಕ 33,000 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ರ್ಸ್ ತಂಡವು ರೂ 22,000 ಹಾಗೂ ಟ್ರೋಫಿಯನ್ನು ಪಡೆದುಕೊಂಡರು. ಐಗೂರು ತಂಡದ ಅಭಿಜಿತ್ ಬಿ ಜೌಟಗದ್ದೆ 27 ರನ್ ಬಾರಿಸುವ ಮೂಲಕ ಉತ್ತಮ ಬ್ಯಾಟ್ಸ್‍ಮ್ಯಾನ್ ಬಹುಮಾನ ಪಡೆದುಕೊಂಡರು. ಮಹಿಳಾ ಕ್ರಿಕೆಟ್‍ನಲ್ಲಿ ಮಲ್ದಾರೆ ಪ್ರಥಮ, ಹಟ್ಟಿಹೊಳೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಮಹಿಳಾ ಹಗ್ಗ ಜಗ್ಗಾಟದಲ್ಲಿ ಐಗೂರು ಭಜರಂಗಿ ಪ್ರಥಮ, ಮಾಲ್ದಾರೆ ದ್ವಿತೀಯ ಸ್ಥಾನ ಪಡೆದುಕೊಂಡರು.









