Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಆ.7 ರಂದು ನೇರ ಸಂದರ್ಶನ*
  • *ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ*
  • *ಕಥೆ ಹಾಗೂ ಪ್ರಬಂಧ ಸ್ಪರ್ಧೆಗೆ ಅರ್ಜಿ ಆಹ್ವಾನ*
  • *ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಪುಸ್ತಕ ಮನೆ ವೆಬ್‍ಸೈಟ್‍ನಲ್ಲಿ ಭರ್ಜರಿ ಆಫರ್*
  • *ಕೊಡಗು ಗೌಡ ವಿದ್ಯಾಸಂಘದಿoದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ : ಅರ್ಜಿ ಸಲ್ಲಿಸಲು ಸೆ.15 ಕೊನೆ ದಿನ*
  • *ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಅಧಿಕಾರ ಸ್ವೀಕಾರ*
  • *30 ವರ್ಷಗಳ ಸುದೀರ್ಘ ಸೇವೆ : ಶಿಕ್ಷಕಿ ಬಿ.ಡಿ.ವನಜಾಕ್ಷಿಗೆ ಬೀಳ್ಕೊಡುಗೆ*
  • *ಕೊಡಗು : ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ*
  • *ಕೊಡಗಿನ ವಿವಿಧೆಡೆ ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥ*
  • *ಪೊನ್ನಂಪೇಟೆಯಲ್ಲಿ ಗಮನ ಸೆಳೆದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮೇ 23 ರಂದು ಮಡಿಕೇರಿಯಲ್ಲಿ ಸಿಂಧೂರ ವಿಜಯೋತ್ಸವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮೇ 23 ರಂದು ಮಡಿಕೇರಿಯಲ್ಲಿ ಸಿಂಧೂರ ವಿಜಯೋತ್ಸವ*

ಮೇ 20, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 20 NEWS DESK : ಭಾರತದ ಸಿಂಧೂರ ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದಕರು ಧರ್ಮದ ಹೆಸರಿನಲ್ಲಿ ನಡೆಸಿದ ಪೈಶಾಚಿಕ ಕೃತ್ಯದಿಂದ ಅಮಾಯಕ ಮಹಿಳೆಯರ ಸಿಂಧೂರ ಅಳಿಸಿ ಹೋದುದಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ನಡೆಸಿದ ‘ಆಪರೇಷನ್ ಸಿಂಧೂರ’ದ ಯಶಸ್ಸಿನ ಹಿನ್ನೆಲೆಯಲ್ಲಿ ಮೇ 23 ರಂದು ನಗರದಲ್ಲಿ ‘ಸಿಂಧೂರ ವಿಜಯೋತ್ಸವ’ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಸಿಂಧೂರ ವಿಜಯೋತ್ಸವ ಸಮಿತಿ ಸಂಚಾಲಕ ಕೆ.ಕೆ.ದಿನೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ಅಂದು ಬೆಳಗ್ಗೆ 10.30ರಿಂದ ನಗರದ ಎವಿ ಶಾಲೆಯ ಬಳಿಯ ಬನ್ನಿ ಮಂಟಪದಿಂದ ಪಕ್ಷ, ಧರ್ಮ ಭೇದವಿಲ್ಲದೆ ಆಯೋಜಿತ ಸಿಂಧೂರ ವಿಜಯೋತ್ಸವ ಗಾಂಧಿ ಮೈದಾನದವರೆಗೆ ನಡೆಯಲಿದೆ. ಇದರಲ್ಲಿ ಜಿಲ್ಲಾ ವ್ಯಾಪ್ತಿಯ ಸಹಸ್ರಾರು ದೇಶ ಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ. ಈ ಬೃಹತ್ ವಿಜಯೋತ್ಸವದ ಮೆರವಣಿಗೆಯಲ್ಲಿ 300 ಅಡಿ(100ಮೀ.)ಯ ಬೃಹತ್ ರಾಷ್ಟ್ರ ಧ್ವಜ ಕೊಂಡೊಯ್ಯಲಾಗುತ್ತದೆಂದು ತಿಳಿಸಿದರು. ಮುಂಚೂಣಿಯಲ್ಲಿ ನಿವೃತ್ತ ಸೇನಾಧಿಕಾರಿಗಳು :: ಸಿಂಧೂರ ವಿಜಯೋತ್ಸವದ ಮೆರವಣಿಗೆಯಲ್ಲಿ ಜಿಲ್ಲೆಯ ಮಾಜಿ ಸೈನ್ಯಾಧಿಕಾರಿಗಳು, ಸೈನಿಕರು ತಮ್ಮ ಸಮವಸ್ತ್ರಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ಇವರು ಮೆರವಣಿಗೆ ಮುಂಚೂಣಿಯಲ್ಲಿದ್ದರೆ, ಇವರ ನಂತರ ಮಹಿಳೆಯರು, ನಂತರ ಬೃಹತ್ ರಾಷ್ಟ್ರಧ್ವಜ, ಇದನ್ನು ಹಿಂಬಾಲಿಸಿಕೊಂಡು ಸಹಸ್ರಾರು ದೇಶಭಕ್ತ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರಮುಖರು, ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು. ‘ತಿರಂಗ ಯಾತ್ರೆ’ :: ಆಪರೇಷನ್ ಸಿಂಧೂರ್‍ನಲ್ಲಿ ಪಾಲ್ಗೊಂಡು, ಪಾಕ್‍ಗೆ ದಿಟ್ಟ ಉತ್ತರವನ್ನು ನೀಡಿ, ಮತ್ತೆಂದಿಗೂ ಭಾರತದತ್ತ ತಿರುಗಿ ನೋಡದಂತೆ ತನ್ನ ಸಾಮರ್ಥ್ಯ ಪ್ರದರ್ಶಿಸಿದ ಭಾರತೀಯ ಸೈನ್ಯಕ್ಕೆ, ಹುತಾತ್ಮರಾದ ವೀರ ಯೋಧರಿಗೆ, ಭಯೋತ್ಪಾದಕರ ದಾಳಿಯಿಂದ ಕೊನೆಯುಸಿರೆಳೆದ ಅಮಾಯಕರಿಗೆ ಗೌರವವನ್ನು ಸಲ್ಲಿಸುವ ಹಾಗೂ ಸೈನ್ಯದ ಪರಾಕ್ರಮದಿಂದ ದೊರೆತ ಮಹತ್ತರ ಯಶಸ್ಸನ್ನು ಸ್ಮರಿಸುವ ‘ಸಿಂಧೂರ ವಿಜಯೋತ್ಸವ’ದಲ್ಲಿ ರಾಷ್ಟ್ರ ಭಕ್ತಿಯ ಘೋಷಣೆಗಳಿಗಷ್ಟೆ ಅವಕಾಶವಿದ್ದು, ಯಾವುದೇ ಪಕ್ಷದ ಧ್ವಜಗಳಿಗು ಅವಕಾಶವಿರುವುದಿಲ್ಲ. ಇದಕ್ಕೆ ಬದಲಾಗಿ ತಿರಂಗ ಧ್ವಜದೊಂದಿಗಿನ ಯಾತ್ರೆ ಇದಾಗಿರಲಿದೆಯೆಂದು ಕೆ.ಕೆ. ದಿನೇಶ್ ಕುಮಾರ್ ಸ್ಪಷ್ಟಪಡಿಸಿದರು. ಗಾಂಧಿ ಮೈದಾನದಲ್ಲಿ ಜನಜಾಗೃತಿ ಸಭೆ :: ಸಿಂಧೂರ ವಿಜಯೋತ್ಸವದ ಬಳಿಕ ಮಧ್ಯಾಹ್ನ 12 ಗಂಟೆಗೆ ಗಾಂಧಿ ಮೈದಾನದಲ್ಲಿ ಜನಜಾಗೃತಿ ಸಭೆ ಕರ್ನಲ್ ಚೋಂದಮ್ಮ(ನಿವೃತ್ತ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಇದರಲ್ಲಿ ನಿವೃತ್ತ ಸೇನಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಅಖಿಲ ಕರ್ನಾಟಕ ನಿವೃತ್ತ ಯೋಧರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ನಿವೃತ್ತ ವಾಯು ಸೇನಾ ಅಧಿಕಾರಿ ಕೊಟ್ಟುಕತ್ತೀರ ಸೋಮಣ್ಣ ಅವರು ಮಾತನಾಡಲಿದ್ದಾರೆ. ಇವರೊಂದಿಗೆ ಪ್ರಮುಖರೊಬ್ಬರು ದಿಕ್ಸೂಚಿ ಭಾಷಣ ಮಾಡಲಿದ್ದು, ಇನ್ನೂ ಅವರ ಹೆಸರು ಅಂತಿಮವಾಗಿಲ್ಲವೆಂದು ತಿಳಿಸಿದರು. ನಾವು ಗೆದ್ದಿದ್ದೇವೆ :: ಪೆಹಲ್ಗಾಮ್‍ನಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದಕ ದಾಳಿಯ ಬಳಿಕ ಇಡೀ ದೇಶದಲ್ಲಿ ಪಾಕ್ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳಬೇಕೆನ್ನುವ ಅನಿಸಿಕೆ ದೇಶ ವಾಸಿಗಳಲ್ಲಿ ವ್ಯಕ್ತವಾಗಿತ್ತು.ಅದರಂತೆ ಅತ್ಯಂತ ಯೋಜನಾಬದ್ಧವಾದ ದಾಳಿಯ ಮೂಲಕ ಪಾಕ್‍ಗೆ ತಕ್ಕ ಪಾಠವನ್ನು ಕಲಿಸಲಾಗಿದೆ. ಈ ನಡುವೆ ಯುದ್ಧ ವಿರಾಮ ಘೋಷಿತವಾಯಿತಾದರು, ಇದೆಂದಿಗೂ ಭಾರತದ ಹೋರಾಟಕ್ಕೆ ಹಿನ್ನಡೆಯಲ್ಲವೆಂದು ದೃಢವಾಗಿ ನುಡಿದ ದಿನೇಶ್, ಆಪರೇಷನ್ ಸಿಂಧೂರದ ಮೂಲಕ ಭಾರತ ವಿಜಯನ್ನು ಸಾಧಿಸಿದೆಯೆಂದು ಹೇಳಿದರು. ವಾಹನ ನಿಲುಗಡೆ :: ಸಿಂಧೂರ ವಿಜಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಜನಸಾಗರ ಹರಿದು ಬರಲಿದ್ದು, ಈ ಹಿನ್ನೆಲೆ ವಾಹನ ನಿಲುಗಡೆಗೆ ನಗರದ ಮೈಸೂರು ರಸ್ತೆಯ ಆರ್‍ಎಂಸಿ ಮೈದಾನ, ಸೈಂಟ್ ಜೋಸೆಫ್ ಕಾನ್ವೆಂಟ್ ಮೈದಾನ, ಖಾಸಗಿ ಬಸ್ ನಿಲ್ದಾಣ, ರಾಜಾಸೀಟು ಬಳಿಯ ರಸ್ತೆಗಳಲ್ಲಿ ಅಗತ್ಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆಯೆಂದು ತಿಳಿಸಿದರು.
ಮನೆ ಮನೆಗಳಿಂದ ಜನ ಹರಿದು ಬರಲಿ :: ಸಿಂಧೂರ ವಿಜಯೋತ್ಸವ ಸಮಿತಿ ಸದಸ್ಯರಾದ ವಿ.ಕೆ.ಲೋಕೇಶ್ ಮಾತನಾಡಿ, ಸಿಂಧೂರ ವಿಜಯೋತ್ಸವದಲ್ಲಿ ಜಿಲ್ಲೆಯ ಪ್ರತಿ ಮನೆ ಮನೆಗಳಿಂದ ಜನರು ಬಂದು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಗೋಣಿಕೊಪ್ಪಲಿನಿಂದ ಬೈಕ್ ಜಾಥ-ಸಮಿತಿ ಸದಸ್ಯ ಪುದಿಯೊಕ್ಕಡ ರಮೇಶ್ ಮಾತನಾಡಿ, ಸಿಂಧೂರ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗೋಣಿಕೊಪ್ಪಲಿನಿಂದ ನೂರಾರು ಮಂದಿ ಬೈಕ್ ಜಾಥ ಮೂಲಕ ವಿರಾಜಪೇಟೆಯನ್ನು ಹಾದು ಮಡಿಕೇರಿಗೆ ಆಗಮಿಸಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಸಿಂಧೂರ ವಿಜಯೋತ್ಸವ ಸಮಿತಿ ಸದಸ್ಯ ಕುಕ್ಕೇರ ಅಜಿತ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಆ.7 ರಂದು ನೇರ ಸಂದರ್ಶನ*

ಆಗಷ್ಟ್ 4, 2026

*ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ*

ಆಗಷ್ಟ್ 4, 2026

*ಕಥೆ ಹಾಗೂ ಪ್ರಬಂಧ ಸ್ಪರ್ಧೆಗೆ ಅರ್ಜಿ ಆಹ್ವಾನ*

ಆಗಷ್ಟ್ 4, 2026

*ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ*

ಆಗಷ್ಟ್ 4, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.4 NEWS DESK : ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯಸೌಧದಲ್ಲಿ ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಪ್ರಗತಿ…

*ಕಥೆ ಹಾಗೂ ಪ್ರಬಂಧ ಸ್ಪರ್ಧೆಗೆ ಅರ್ಜಿ ಆಹ್ವಾನ*

ಆಗಷ್ಟ್ 4, 2026

*ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಪುಸ್ತಕ ಮನೆ ವೆಬ್‍ಸೈಟ್‍ನಲ್ಲಿ ಭರ್ಜರಿ ಆಫರ್*

ಆಗಷ್ಟ್ 4, 2026

*ಕೊಡಗು ಗೌಡ ವಿದ್ಯಾಸಂಘದಿoದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ : ಅರ್ಜಿ ಸಲ್ಲಿಸಲು ಸೆ.15 ಕೊನೆ ದಿನ*

ಆಗಷ್ಟ್ 4, 2026

*ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಅಧಿಕಾರ ಸ್ವೀಕಾರ*

ಆಗಷ್ಟ್ 4, 2026

*30 ವರ್ಷಗಳ ಸುದೀರ್ಘ ಸೇವೆ : ಶಿಕ್ಷಕಿ ಬಿ.ಡಿ.ವನಜಾಕ್ಷಿಗೆ ಬೀಳ್ಕೊಡುಗೆ*

ಆಗಷ್ಟ್ 4, 2026

*ಕೊಡಗು : ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ*

ಆಗಷ್ಟ್ 4, 2026

*ಕೊಡಗಿನ ವಿವಿಧೆಡೆ ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥ*

ಆಗಷ್ಟ್ 4, 2026

*ಪೊನ್ನಂಪೇಟೆಯಲ್ಲಿ ಗಮನ ಸೆಳೆದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟ*

ಆಗಷ್ಟ್ 3, 2026

*ವಿರಾಜಪೇಟೆ : ಪೊಲೀಸ್ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ*

ಆಗಷ್ಟ್ 3, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.