
ಮಡಿಕೇರಿ ಮೇ 23 NEWS DESK : ತೂಚಮಕೇರಿ ಪೆಮ್ಮಂಡ ಕುಟುಂಬಸ್ಥರ ವತಿಯಿಂದ ಜೂ.7 ಮತ್ತು 8 ರಂದು ನಡೆಯಲಿರುವ ಕೊಡವ ಕುಟುಂಬಗಳ ನಡುವಿನ ತೋಕ್ ನಮ್ಮೆ-2025 ಗುಂಡು ಹೊಡೆಯುವ ಸ್ಪರ್ಧೆಯ ಲಾಂಛನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಿಡುಗಡೆ ಮಾಡಿದರು. ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಆಯೋಜಕರಿಗೆ ಶುಭಹಾರೈಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಸ್ಪರ್ಧಾ ಕೂಟದ ಆಯೋಜಕರು ಹಾಜರಿದ್ದರು.










