
ನಾಪೋಕ್ಲು ಮೇ 26 NEWS DESK : ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ.
ಸಮೀಪದ ಕಕ್ಕಬೆಯ-ನಾಲಾಡಿ ಗ್ರಾಮದ ಕೋಡಿಮನಿಯಂಡ ರಸ್ತೆಯಲ್ಲಿ ಮರ ಒಂದು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಹೊದ್ದೂರು ಗ್ರಾಮದ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬಗಳ ಮೇಲೆ ಮಳೆ ಗಾಳಿಗೆ ಮರ ಮುರಿದು ಬಿದ್ದು ಕೆಲವು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕಕ್ಕೆ ತೊಡಕಾಗಿದೆ. ಕಕ್ಕಬ್ಬೆ ಪ್ರೌಢ ಶಾಲೆಯ ಮುಖ್ಯದ್ವಾರದ ಬಳಿ ಹೈ ಟೆನ್ಶನ್ ತಂತಿಗಳ ಮೇಲೆ ಗಾಲಿ ಮಳೆಗೆ ಮರ ಮುರಿದು ಬಿದ್ದುವಿದ್ಯುತ್ ಸಂಪರ್ಕ ಕಡಿತಗೊಂಡು ಅಪಾಯ ಮಟ್ಟದಲ್ಲಿದ್ದು ಆತಂಕಕ್ಕೆ ಕಾರಣವಾಗಿದೆ.
ವರದಿ : ದುಗ್ಗಳ ಸದಾನಂದ.









