ಗೋಣಿಕೊಪ್ಪಲು ಜೂ.28 NEWS DESK : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿರಾಜಪೇಟೆ ನಾಟ್ಯಮಯೂರಿ ನೃತ್ಯ ಟ್ರಸ್ಟ್ ನೀಡುವ ಕರುನಾಡ ಕಲ್ಪವೃಕ್ಷ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗೋಣಿಕೊಪ್ಪಲು ಭರತನಾಟ್ಯ ಕಲಾವಿದೆ ಪಿ.ಎಂ.ಲಿದಿನಾ ಪಡೆದುಕೊಂಡರು. ಬೆಂಗಳೂರಿನ ಕನ್ನಡ ಭವನದ ರವೀಂದ್ರ ಕಲಾಕ್ಷೇತ್ರದ ನಯನಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕಲಾವಿದ ಶಶಿಧರ್ ಕೋಟೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ನಾಟ್ಯ ಮಯೂರಿ ನೃತ್ಯ ಸಂಸ್ಥೆಯ ಪ್ರೇಮಾಂಜಲಿ ಸಾಹಿತಿ ಡಾ. ಕೆಂಚನೂರು ಶಂಕರ ಇದ್ದರು.











