
ಕುಶಾಲನಗರ ಜೂ.28 NEWS DESK : ಅತ್ಯಾಧುನಿಕ ತಂತ್ರಜ್ಞಾನಗಳ ಅರಿವು, ತರಬೇತಿ ಹೊಂದುವ ಮೂಲಕ ಸೌಂದರ್ಯ ತಜ್ಞರು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವಂತಾಗಬೇಕೆಂದು ಸೋಮು ಹಾಸನ್ ಹೇರ್ ಅಂಡ್ ಮೇಕಪ್ ಅಕಾಡೆಮಿ ಮಾಲೀಕರು ಹಾಗೂ ಅಂತರಾಷ್ಟ್ರೀಯ ಮಟ್ಟದ ಮೇಕಪ್ ತರಬೇತುದಾರರಾದ ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಸಮೀಪ ಕೊಪ್ಪ ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಮೇಕ್ ಓವರ್ ಸ್ಟುಡಿಯೋ ಉದ್ಘಾಟಿಸಿ ಮಾತನಾಡಿದರು. ನಿರಂತರ ಅನುಭವದೊಂದಿಗೆ ಸೌಂದರ್ಯ ತಜ್ಞರು ತಮ್ಮ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ನೀಡುವ ಮೂಲಕ ಖ್ಯಾತಿಗಳಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಮಾತನಾಡಿ, ಯುವತಿಯರು ಹಾಗೂ ಮಹಿಳೆಯರು ಸೌಂದರ್ಯ ತಜ್ಞರಾಗಿ ತಮ್ಮ ಗ್ರಾಹಕರ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ಮೆಚ್ಚುಗೆಯ ವಿಚಾರವಾಗಿದೆ. ಆಧುನಿಕ ತಂತ್ರಜ್ಞಾನದ ತರಬೇತಿ ಹೊಂದುವ ಮೂಲಕ ಆರಂಭಗೊಂಡಿರುವ ನೂತನ ಸಂಸ್ಥೆಗೆ ಅವರು ಶುಭ ಕೋರಿದರು. ಈ ಸಂದರ್ಭ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಖ್ಯಾತ ಪಾರಂಪರಿಕ ವೈದ್ಯರಾದ ಲೀಲಾವತಿ ಗಣಪತಿ, ಕೊಡಗು ಜಿಲ್ಲಾ ಬ್ಯೂಟಿಷಿಯನ್ ತಜ್ಞರ ಸಂಘದ ಅಧ್ಯಕ್ಷರಾದ ರತ್ನ ಯತೀಶ್, ಗೌರವಾಧ್ಯಕ್ಷ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ ಮೇಕ್ ಓವರ್ ಸ್ಟುಡಿಯೋ ಮಾಲೀಕರಾದ ಚೈತನ್ಯ ಮತ್ತಿತರರು ಇದ್ದರು.











