ಸೋಮವಾರಪೇಟೆ ಜೂ.28 NEWS DESK : ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಅಂಜನೇಯ ದೇವಾಲಯದಿಂದ ಒಎಲ್‍ವಿ ಕಾನ್ವೆಂಟ್ ರಸ್ತೆ ಗುಂಡಿಮಯವಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರಿಳಿಕೆಯ ರಸ್ತೆಯಾಗಿದ್ದು. ಮದ್ಯದಲ್ಲಿ ಮಾತ್ರ ರಸ್ತೆ ಸಮತಟ್ಟಾಗಿ ಗುಂಡಿಗಳಿಂದ ಕೂಡಿದೆ. ಮಳೆಗಾಲದಲ್ಲಿ ಹೊಂಡಮಯವಾಗುವುದರಿಂದ ವಿದ್ಯಾರ್ಥಿಗಳು ನಡೆದಾಡಲು ಕಷ್ಟಪಡಬೇಕಾಗಿದೆ. ಶಾಲಾ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗಿದೆ. ರಸ್ತೆ ಸರಿಪಡಿಸಲು ಸಾಕಷ್ಟು ಭಾರಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರಾದ ಮೋಹನ್, ಮುರುಳೀಧರ್, ಕುಶಾಲಪ್ಪ ಆರೋಪಿಸಿದ್ದಾರೆ. ಆಡಳಿತ ಪಕ್ಷದ ಪ್ರಮುಖರು ಈ ರಸ್ತೆಯನ್ನೂ ಅವಲಂಭಿಸಿದ್ದಾರೆ. ಆದರೂ ರಸ್ತೆ ದುರಸ್ತಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ರಸ್ತೆ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.











