ಮಡಿಕೇರಿ NEWS DESK ಜೂ.28 : ಕೊಡಗು ಮೂಲದ ಲೇಖಕ ಹಾಗೂ ಎಂಜಿನಿಯರ್ ಮೂಕೊಂಡ ಪಿ.ನಿತಿನ್ ಕುಶಾಲಪ್ಪ ಅವರ ‘ದಕ್ಷಿಣ್ : ಸೌತ್ ಇಂಡಿಯನ್ ಮಿಥ್ಸ್ ಅಂಡ್ ಫೇಬಲ್ಸ್ ರಿಟೋಲ್ಡ್’, ಕೃತಿಗಾಗಿ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ದೊರೆತ್ತಿದೆ. ‘ದಕ್ಷಿಣ್ : ಸೌತ್ ಇಂಡಿಯನ್ ಮಿಥ್ಸ್ ಅಂಡ್ ಫೇಬಲ್ಸ್ ರಿಟೋಲ್ಡ್’, ಕೃತಿ ಕಥೆ ಹೇಳುವ ವಿಶಿಷ್ಟ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ರೂ.50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ನಿತಿನ್, ಕೊಡಗಿನ ಸ್ಥಳೀಯ ಇತಿಹಾಸ, ಜಾನಪದ ಮತ್ತು ಕಾದಂಬರಿಯಲ್ಲಿ ಆಳವಾದ ಆಸಕ್ತಿ ಹೊಂದಿದ್ದಾರೆ. ಅವರ ಗಮನಾರ್ಹ ಪ್ರಕಟಣೆಗಳಲ್ಲಿ ‘ದಿ ಅರ್ಲಿ ಕೂರ್ಗ್ಸ್’, ‘ಲಾಂಗ್ ಎಗೋ ಇನ್ ಕೂರ್ಗ್’, ‘1785 ಕೂರ್ಗ್’, ‘ಕೊಡಗು ಪ್ರಿನ್ಸಿಪಾಲಿಟಿ ವರ್ಸಸ್ ಬ್ರಿಟಿಷ್ ಎಂಪೈರ್’, ‘ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್’, ‘ದಿ ಹೌಸ್ ಆಫ್ ಅವಧ್’ ಮತ್ತು ‘ದಿ ಗಾಂಧಿ ಆಫ್ ಕೊಡಗು’ ಸೇರಿವೆ. ನಾನು ಇಲ್ಲಿಯವರೆಗೆ ಏಳು ಇತರ ಪುಸ್ತಕಗಳನ್ನು ರಚಿಸಿದ್ದರೂ, ಇದು ಮಕ್ಕಳಿಗಾಗಿ ನನ್ನ ಮೊದಲ ಪುಸ್ತಕ. ಈ ಪ್ರಶಸ್ತಿಯನ್ನು ಗೆಲ್ಲುವುದು ಅನಿರೀಕ್ಷಿತವಾಗಿತ್ತು ಮತ್ತು ನನ್ನ ಕೃತಿಗೆ ಮನ್ನಣೆ ಸಿಕ್ಕಿರುವುದಕ್ಕೆ ಹೆಮ್ಮೆ ಎನಿಸಿದೆ ಎಂದು ನಿತಿನ್ ಹರ್ಷ ವ್ಯಕ್ತಪಡಿಸಿದ್ದಾರೆ. ನನಗೆ ಬಾಲ ಸಾಹಿತ್ಯ ಪುರಸ್ಕಾರವನ್ನು ನೀಡಿದ್ದಕ್ಕಾಗಿ ಸಾಹಿತ್ಯ ಅಕಾಡೆಮಿಗೆ, ಪ್ರಕಾಶಕರು, ಪುಸ್ತಕ ಏಜೆಂಟರು, ಸಂಬಂಧಿಕರು, ಸ್ನೇಹಿತರು ಹಾಗೂ ಸಾಹಿತ್ಯ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಮೂಕೊಂಡ ಪಿ.ನಿತಿನ್ ಕುಶಾಲಪ್ಪ ಅವರು ಅಮ್ಮತ್ತಿ ನಿವಾಸಿಗಳಾದ ಮೂಕೊಂಡ ಕೆ. ಪೂಣಚ್ಚ (ಸನ್ನಿ) ಹಾಗೂ ಎಂ.ಪಿ.ದಮಯAತಿ (ಪುಷ್ಪ) ದಂಪತಿ ಪುತ್ರ.











