
ವಿರಾಜಪೇಟೆ ಜು.4 NEWS DESK : ಕಕ್ಕಬ್ಬೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾದ ಪಿ.ಯು.ಗೋಪಾಲ ಅವರನ್ನು ಯೂನಿಯನ್ ಬ್ಯಾಂಕ್ ಶಾಖೆಯ ವತಿಯಿಂದ ಬೋಳ್ಕೊಡಲಾಯಿತು. ಬ್ಯಾಂಕ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಖೆಯ ಬ್ಯಾಂಕ್ ವ್ಯವಸ್ಥಾಪಕರಾದ ಅಂತೋನಿ ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಕೊಡಗು ವಲಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನೌಕರರ ಸಂಘದ ಕಾರ್ಯದರ್ಶಿ ಜೇಮ್ಸ್ ಮೆನೇಜಸ್, ಸಿಬ್ಬಂದಿಗಳಾದ ಸಜಿತ್, ಹೇಮಾವತಿ, ದೇಚಮ್ಮ ಹಾಜರಿದ್ದರು.









