Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಂಬಿರಂಡ ರಾಖಿ ಪೂವಣ್ಣ ಅವರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ*
  • *ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*
  • *ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*
  • *ನಾಪೋಕ್ಲುವಿನ ಸಹಕಾರ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆ*
  • *ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಆಗ್ರಹ; ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡುವಂತೆ ಡಾ. ಕಾವೇರಪ್ಪ ಒತ್ತಾಯ*
  • *ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ಕಾರ್ಯಕ್ರಮ*
  • *ಕಡೋಡಿ ಶ್ರೀ ಮಹಾವಿಷ್ಣು ಸನ್ನಿಧಿಯಲ್ಲಿ ಸೋಣ ತಿಂಗಳ ಕಾಲಾಯ ಸೇವೆ ಸಂಪನ್ನ*
  • *ಮಾದಾಪುರ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸಂಸ್ಥಾಪನಾ ದಿನ; ಶಿಸ್ತು, ಸೇವಾ ಮನೋಭಾವ ಬೆಳೆಸುವುದು ಎನ್ನೆಸ್ಸೆಸ್ ಗುರಿ: ಪ್ರಾಂಶುಪಾಲ ಚಂದ್ರ*
  • *ಖುತುಬುಲ್ ಆರಿಫೀನ್ ರಾತೀಬ್ ಸಂಘದ ವತಿಯಿಂದ 111ನೇ ವರ್ಷದ ಗ್ರಾಂಡ್ ರಾತೀಬ್ ಮಜ್ಲಿಸ್*
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆ : ಮುಸ್ಲಿಂ ಯೂನಿಟಿಯಿಂದ ಹಕ್ಕೊತ್ತಾಯಗಳ ಮಂಡನೆ : ಅಧ್ಯಕ್ಷರಾಗಿ ಕೆ.ಎ.ಯಾಕುಬ್, ಯುವ ಘಟಕದ ಅಧ್ಯಕ್ಷರಾಗಿ ಅಮೀನ್ ಮೊಹಿಸಿನ್ ಆಯ್ಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆ : ಮುಸ್ಲಿಂ ಯೂನಿಟಿಯಿಂದ ಹಕ್ಕೊತ್ತಾಯಗಳ ಮಂಡನೆ : ಅಧ್ಯಕ್ಷರಾಗಿ ಕೆ.ಎ.ಯಾಕುಬ್, ಯುವ ಘಟಕದ ಅಧ್ಯಕ್ಷರಾಗಿ ಅಮೀನ್ ಮೊಹಿಸಿನ್ ಆಯ್ಕೆ*

ಜುಲೈ 7, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಜು.7 NEWS DESK : ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆ ನಡೆಯಿತು. ಮುಸಲ್ಮಾನರ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ವಿವಿಧ ಹಕ್ಕೊತ್ತಾಯಗಳನ್ನು ಸಭೆ ಮಂಡಿಸಿತು. ಕುಶಾಲನಗರ ಸಮೀಪ ಗುಡ್ಡೆಹೊಸೂರಿನ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಮುಸ್ಲಿಂ ಯೂನಿಟಿಯ ರಾಜ್ಯಾಧ್ಯಕ್ಷ ಜಬ್ಬರ್ ಕಲ್ಬುರ್ಗಿ ಅವರು ಮುಸಲ್ಮಾನರು ಇಂದು ಸಮಾಜಿಕ ಮತ್ತು ರಾಜಕೀಯವಾಗಿ ತಾರತಮ್ಯಕ್ಕೆ ಒಳಗಾಗುತ್ತಿದ್ದು, ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ನಾವೆಲ್ಲರು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು. ಐಕ್ಯತೆಯ ಕೂಗಿನೊಂದಿಗೆ ಮುಸಲ್ಮಾನರ ಏಳಿಗೆಗಾಗಿ ಪ್ರಮುಖ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಡಬೇಕಾಗಿದೆ ಎಂದು ಸಭೆಯ ಒಪ್ಪಿಗೆ ಪಡೆದರು. *ಹಕ್ಕೊತ್ತಾಯಗಳು* 2ಬಿ ಯ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ರಾಜ್ಯದ ಈ ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕೈಬಿಟ್ಟು ಮೀಸಲಾತಿಯನ್ನು ಯಥಾಸ್ಥಿತಿ ಮುಂದುವರಿಸಬೇಕು ಮತ್ತು ಜನಸಂಖ್ಯೆಯನ್ನು ಆಧರಿಸಿ ಶೇ.4 ರಷ್ಟಿರುವ ಮೀಸಲಾತಿಯನ್ನು ಶೇ.8 ಕ್ಕೆ ಏರಿಕೆ ಮಾಡಬೇಕು. ಸ್ಥಳಿಯ ಸಂಸ್ಥೆಗಳಲ್ಲಿರುವ ಓಬಿಸಿಯ ಒಟ್ಟು ಮೀಸಲಾತಿಯಲ್ಲಿ ಎಲ್ಲಾ ಜಾತಿಗಳಿಗೆ ಪ್ರತ್ಯೇಕ ಒಳಮೀಸಲಾತಿ ತರಲು ಕಾನೂನು ತಿದ್ದುಪಡಿ ಮಾಡಬೇಕು. ಅಲ್ಪಸಂಖ್ಯಾತ ಸಮುದಾಯದ ಆಡಳಿತ ಮಂಡಳಿಗಳು ನಡೆಸುತ್ತಿರುವ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅನುದಾನ ನೀಡಬೇಕು. ಶಿಕ್ಷಣ ಸಂಸ್ಥೆಗಳ ಕಟ್ಟಡ ಮತ್ತು ಮೂಲಭೂತ ಸೌಕರ್ಯಕ್ಕೆ ಕಾರ್ಯಯೋಜನೆ ಜಾರಿಗೊಳಿಸಬೇಕು. ವಕ್ಫ್ ಮಂಡಳಿಯಲ್ಲಿ ಬದಲಾವಣೆಯನ್ನು ತಂದು ವಕ್ಫ್ ನ ಹಕ್ಕು ಮತ್ತು ಸ್ವತಂತ್ರವನ್ನು ಮೊಟುಕುಗೊಳಿಸುವ ಕೇಂದ್ರ ಸರಕಾರದ ಹೊಸ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರಕಾರ ನಿರ್ಣಯ ಕೈಗೊಳ್ಳಬೇಕು. ನಿರ್ಣಯದ ಪ್ರತಿಯನ್ನು ನ್ಯಾಯಾಲಯಕ್ಕೆ ಮತ್ತು ರಾಷ್ಟ್ರಪತಿಗಳಿಗೆ ನೀಡಬೇಕು. ರಾಜ್ಯದಲ್ಲಿ ಲೈಸೆನ್ಸ್ ಹೊಂದಿರುವ ಮುಸ್ಲಿಂ ಗುತ್ತಿಗೆದಾರರಿಗೆ ಆದ್ಯತೆ ಮತ್ತು ವಿಶೇಷ ಅವಕಾಶಗಳನ್ನು ನೀಡಿ ಸರ್ಕಾರ ತಾನು ಹೊರಡಿಸಿರುವ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ದೇಶದಲ್ಲಿ ಜಾರಿಯಲ್ಲಿರುವ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ಯೋಜನೆಗಳು ಜನರಿಗೆ ತಲುಪುವಂತೆ ಕ್ರಮಕೈಗೊಳ್ಳಬೇಕು. ಕರ್ನಾಟಕ ಅಲ್ಪಸಂಖ್ಯಾತ ಆಯೋಗ ಮತ್ತು ಇಲಾಖೆಗಳು ಜಂಟಿಯಾಗಿ ತ್ರೈಮಾಸಿಕ ಸಭೆಗಳನ್ನು ನಡೆಸುವ ಮೂಲಕ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಒತ್ತಾಯಿಸಿತು. *ಕೆ.ಎ.ಯಾಕುಬ್ ಅವಿರೋಧ ಆಯ್ಕೆ* ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಇದೇ ಸಂದರ್ಭ ಆಯ್ಕೆ ಮಾಡಲಾಯಿತು. ಸಭೆಯಲ್ಲಿದ್ದವರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ಹಿನ್ನೆಲೆ ಹಿರಿಯರಾದ ಕೆ.ಎ.ಯಾಕುಬ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಹಾಗೂ ಅಮೀನ್ ಮೊಹಿಸಿನ್ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ ಕೆ.ಎ.ಯಾಕುಬ್ ಅವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಮುಸಲ್ಮಾನರಿದ್ದು, ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದಕ್ಕಾಗಿ ಒಂದೇ ವೇದಿಕೆಯಡಿ ಗುರುತಿಸಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ. ಸಂಘಟನೆ ಮುಂದಿನ ದಿನಗಳಲ್ಲಿ ಮುಸಲ್ಮಾನರ ಹಕ್ಕುಗಳಿಗಾಗಿ ಹೋರಾಟ ನಡೆಸಲಿದೆ ಎಂದರು. ಸಮಾಲೋಚನಾ ಸಭೆಯಲ್ಲಿ ಮುಸ್ಲಿಂ ಯೂನಿಟಿಯ ಯುವ ಘಟಕದ ಅಧ್ಯಕ್ಷ ನೂರ್ ಅಹಮ್ಮದ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ಫರ್ಹಾನಾ ಬೇಗಂ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಎ.ಬಿ.ಉಮ್ಮರ್, ಎಂ.ಹೆಚ್.ಮೊಹಮ್ಮದ್, ಎಂ.ಬಿ.ಹಮೀದ್, ಸಮಿತಿಯ ಸೋಮವಾರಪೇಟೆ ಅಧ್ಯಕ್ಷ ಕೆ.ಎ.ಆದಂ, ಮಂಗಳೂರು ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ನಾಸಿರ್, ಸದಸ್ಯ ಅಮ್ಜದ್, ಎಕ್ಸ್ ಲೆನ್ಸಿ ರೆಸಾರ್ಟ್ ನ ಮಾಲೀಕ ಮೊಯ್ದು, ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬ್ಬುಬಕ್ಕರ್ ಸಖಾಫಿ, ಜಿ.ಪಂ ಮಾಜಿ ಸದಸ್ಯ ಮೊಯ್ದೀನ್ ಕುಜ್ಞ, ಪ್ರಮುಖರಾದ ಸಿ.ಎಂ.ಹಮೀದ್ ಮೌಲವಿ ಸುಂಟಿಕೊಪ್ಪ, ಇಸ್ಮಾಯಿಲ್ ನಾಪೋಕ್ಲು, ಹಂಸ ಕೊಟ್ಟಮುಡಿ, ಅಬ್ದುಲ್ ಮಜೀದ್ ಕುಶಾಲನಗರ, ಮುಸ್ತಫ 7ನೇ ಹೊಸಕೋಟೆ, ಹಕೀಂ ನೆಲ್ಲಿಹುದಿಕೇರಿ, ಅಬ್ದುಲ್ ರೆಹಮಾನ್ ಬಾಪು ಗೋಣಿಕೊಪ್ಪ, ಇಜ್ಜಾಸ್ ವಿರಾಜಪೇಟೆ, ಮಜೀದ್ ಸಿದ್ದಾಪುರ, ಮೊಹಿದೀನ್ ಕುಟ್ಟ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Related Posts

*ಕಂಬಿರಂಡ ರಾಖಿ ಪೂವಣ್ಣ ಅವರಿಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ*

ಸೆಪ್ಟೆಂಬರ್ 27, 2026

*ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*

ಸೆಪ್ಟೆಂಬರ್ 27, 2026

*ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*

ಸೆಪ್ಟೆಂಬರ್ 27, 2026

*ವಿರಾಜಪೇಟೆಯಲ್ಲಿ ಕಾವೇರಿ ಗಣೇಶೋತ್ಸವ: ಒಗ್ಗಟ್ಟಿನಿಂದ ಹಿಂದೂ ಸಮಾಜ ಬಲಪಡಿಸಲು ಕರೆ*

ಸೆಪ್ಟೆಂಬರ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಸೆ.27: ಪುಣ್ಯಭೂಮಿಯ ಶಕ್ತಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಅರಿತು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರ…

*ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕಾವೇರಿ ಶಾಲೆಯ ವಾಲಿಬಾಲ್ ತಂಡ*

ಸೆಪ್ಟೆಂಬರ್ 27, 2026

*ನಾಪೋಕ್ಲುವಿನ ಸಹಕಾರ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 27, 2026

*ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಆಗ್ರಹ; ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡುವಂತೆ ಡಾ. ಕಾವೇರಪ್ಪ ಒತ್ತಾಯ*

ಸೆಪ್ಟೆಂಬರ್ 27, 2026

*ಇಂದಿರಾನಗರ ಅಂಗನವಾಡಿ ಕೇಂದ್ರದಲ್ಲಿ ‘ಪೋಷಣ್ ಅಭಿಯಾನ’ ಕಾರ್ಯಕ್ರಮ*

ಸೆಪ್ಟೆಂಬರ್ 27, 2026

*ಕಡೋಡಿ ಶ್ರೀ ಮಹಾವಿಷ್ಣು ಸನ್ನಿಧಿಯಲ್ಲಿ ಸೋಣ ತಿಂಗಳ ಕಾಲಾಯ ಸೇವೆ ಸಂಪನ್ನ*

ಸೆಪ್ಟೆಂಬರ್ 27, 2026

*ಮಾದಾಪುರ ಕಾಲೇಜಿನಲ್ಲಿ ಎನ್ನೆಸ್ಸೆಸ್ ಸಂಸ್ಥಾಪನಾ ದಿನ; ಶಿಸ್ತು, ಸೇವಾ ಮನೋಭಾವ ಬೆಳೆಸುವುದು ಎನ್ನೆಸ್ಸೆಸ್ ಗುರಿ: ಪ್ರಾಂಶುಪಾಲ ಚಂದ್ರ*

ಸೆಪ್ಟೆಂಬರ್ 27, 2026

*ಖುತುಬುಲ್ ಆರಿಫೀನ್ ರಾತೀಬ್ ಸಂಘದ ವತಿಯಿಂದ 111ನೇ ವರ್ಷದ ಗ್ರಾಂಡ್ ರಾತೀಬ್ ಮಜ್ಲಿಸ್*

ಸೆಪ್ಟೆಂಬರ್ 27, 2026

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.