ಕುಶಾಲನಗರ ಜು.11 NEWS DESK : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಅನಾಹತ ಯುನೈಟೆಡ್ ಎಫರ್ಟ್ ಫೌಂಡೇಶನ್ ಸಹ ಯೋಗದೊಂದಿಗೆ ಕೂಡಿಗೆ ಮೊರಾರ್ಜಿ ದೇಸಾತತ್ವಯಿ ವಸತಿ ಶಾಲೆಯಲ್ಲಿ ಎರಡು ದಿನಗಳ ವೃತ್ತಿ ಯೋಜನೆಯ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಮನ್ವಯ ಅಧಿಕಾರಿ ಭಾರತಿ ವೃತ್ತಿ ಯೋಜನೆ ಕಾರ್ಯಕ್ರಮ ಹಿಂದಿನ ವರ್ಷದಿಂದಲೂ ನಡೆಯುತ್ತಿದ್ದು, ಇದರ ಉಪಯೋಗ ಮಕ್ಕಳಿಗೆ ತಲುಪುತಿದ್ದು 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವೃತ್ತಿ ವಲಯಗಳು “ವಿದ್ಯಾರ್ಥಿಗಳನ್ನ ವೃತ್ತಿಯೆಡೆಗೆ (ಸ್ಟೂಡೆಂಟ್ಸ್ ಟು ಪ್ರೋಫೇಶನಲ್) ಎಂಬ ಅಂಶವನ್ನು ಆಧರಿಸಿ ವಿದ್ಯಾರ್ಥಿಗಳಲ್ಲಿ ಕೆಲಸದ ಆಸಕ್ತಿಗಳನ್ನು ಗುರುತಿಸುವುದು, ವೃತ್ತಿ ಆಯ್ಕೆಗಳನ್ನು ತಿಳಿದುಕೊಳ್ಳುವುದು ಅದಕ್ಕೆ ಸಂಬಂದಿಸಿದ ಶೈಕ್ಷಣಿಕ ಆಯ್ಕೆಗಳನ್ನು ಅಧ್ಯಯನ ಮಾಡುವಂತೆ ಹಾಗೂ ವೃತ್ತಿ ಯೋಜನೆಯನ್ನು ವಿದ್ಯಾರ್ಥಿಗಳು ತಾವೇ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಾಸ್ತವಿಕವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ,ಮಾತನಾಡಿ ಮಕ್ಕಳಿಗೆ ತಮ್ಮ ಪ್ರೌಢಶಾಲಾ ಹಂತದಲ್ಲೇ ಆಸಕ್ತಿಗನುಗುಣವಾಗಿ ಗುರಿಯನ್ನು ನಿರ್ಧರಿಸಲು ಹಾಗೂ ಆ ಗುರಿಯ ಹಾದಿಯಲ್ಲಿ ಮುನ್ನಡೆಸಲು ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕು . ವಿದ್ಯಾರ್ಥಿಗಳು ಬಾಲ್ಯದಿಂದಲೇ ಉತ್ತಮ ಜೀವನ ಕಟ್ಟಿಕೊಳ್ಳುವೆಡೆಗೆ ಅವರನ್ನು ತರಬೇತಿಗೊಳಿಸಿದರೆ ಅವರು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅನಾಹತ ಯುನೈಟೆಡ್ ಫರ್ಟ್ಸ್ ಫೌಂಡೇಶನ್ ನ ತರಬೇತುದರ ಸಿದ್ದೇಶ್ ಎಸ್ ರವರು ಮಾತನಾಡುತ್ತಾ ಎಲ್ಲಾ ವಸತಿ ಶಾಲೆಯಲ್ಲಿನ ಮಕ್ಕಳು ವೃತ್ತಿ ವಲಯಗಳು ಹಾಗೂ ಮತ್ತು ವೃತ್ತಿ ಯೋಜನೆ ಬಗ್ಗೆ ಈಗಲಿಂದಲೇ ಯೋಜಿಸುವುದು ಬಹಳ ಮುಖ್ಯ .2030 ರ ವರ್ಷಕ್ಕೆ ಎರಡು ಕೋಟಿ ವಿದ್ಯಾರ್ಥಿಗಳಿಗೆ ಈ ಮಾಹಿತಿ ತಲುಪಬೇಕೆಂಬುದು ಸಂಸ್ಥೆಯ ಉದ್ದೇಶವಾಗಿರುತ್ತದೆ ಎಂದು ಶಿಕ್ಷಕರಿಗೆ ಹೇಳಿದರು ವೃತ್ತಿ ಯೋಜನೆಯನ್ನು ವಿದ್ಯಾರ್ಥಿಗಳು ತಾವೇ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಿಭಾಗೀಯ ಮುಖ್ಯಸ್ಥರಾದ ಪ್ರಸನ್ನ ಕುಮಾರ್ ಡಿ ಕೆ ಮಾತನಾಡಿ ಉದ್ಯೋಗ ಹಾಗೂ ಅದಕ್ಕೆ ಬೇಕಾದ ಕೌಶಲ್ಯಗಳ ನಡುವೆ ಉಂಟಾದ ಬಿರುಕನ್ನು ಎಸ ಹಾಗೂ ವಿದ್ಯಾರ್ಥಿಗಳು ಯೋಜಿತ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಕೆಲಸದಲ್ಲಿ ತೃಪ್ತಿ ಮತ್ತು ಸಂತೋಷವನ್ನು ಪಡುವುದರ ಜೊತೆಗೆ ದೇಶದ ಆರ್ಥಿಕತೆಗೆ ಕೊಡುಗೆ ಸಲ್ಲಿಸಲು ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯಾಗಿದೆ. ಈ ಸಂದರ್ಭದಲ್ಲಿ ಅನಾಹತ ಯುನೈಟೆಡ್ ಸಂಸ್ಥೆಯ ತರಬೇತುದಾರ ರಾಘವೇಂದ್ರ ವಿ.ಎಸ್ , ಶಾಲೆಯ ಶಿಕ್ಷಕರಾದ ಕೆ. ಅಮೃತ, ದಿನೇಶ್ ಆಚಾರ್ ಹಾಗೂ ಜಿಲ್ಲೆಯ 7 ವಸತಿ ಶಾಲೆಗಳಿಂದ 14 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಮೃತ್ ಸ್ವಾಗತಿಸಿ, ವಂದಿಸಿದರು.










